ಪುತ್ತೂರು: ಇಲ್ಲಿನ ನೆಲ್ಯಾಡಿ ಗ್ರಾಮದ ಬೊನ್ಯಸಾಗು ಪೂವಣಿ ಗೌಡ ಎಂಬುವರ ತೋಟಕ್ಕೆ ನಿನ್ನೆ ರಾತ್ರಿ ಕಾಡಾನೆಯೊಂದು ನುಗ್ಗಿ ಅಡಿಕೆ, ಗದ್ದೆ, ತೆಂಗಿನ ಮರಗಳನ್ನು ನಾಶಪಡಿಸಿದೆ. ಇದರಿಂದ ತೋಟದ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಪುತ್ತೂರು: ತೋಟಕ್ಕೆ ನುಗ್ಗಿ ಅಪಾರ ಹಾನಿ ಮಾಡಿದ ಕಾಡಾನೆ - Elephant attack on a farm
ಕಾಡಾನೆಯೊಂದು ಕೃಷಿ ತೋಟಕ್ಕೆ ನುಗ್ಗಿ ಅಡಿಕೆ, ಗದ್ದೆ, ತೆಂಗಿನ ಮರಗಳನ್ನು ನಾಶಪಡಿಸಿರುವ ಘಟನೆ ಪುತ್ತೂರಿನ ನೆಲ್ಯಾಡಿ ಗ್ರಾಮದಲ್ಲಿ ನಡೆದಿದೆ.

ಹಾಳಾಗಿರುವ ಭತ್ತದ ಗದ್ದೆ
ಅಡಿಕೆ, ತೆಂಗು, ಬಾಳೆ, ಭತ್ತದ ಪೈರು, ಕಟಾವಿಗೆ ಬಂದಿರುವ ಹುಲ್ಲನ್ನು ಆನೆ ಹಾನಿ ಮಾಡಿದೆ. ಆನೆ ಮನಸೋ ಇಚ್ಛೆ ಓಡಾಡಿ ಭತ್ತದ ಗದ್ದೆ ಹಾಳು ಮಾಡಿದೆ. ಪೂವಣಿ ಗೌಡರ ಜಮೀನು ಹಾಗೂ ಹತ್ತಿರದ ಜಮೀನಿಗೂ ನುಗ್ಗಿದೆ.
ಹಾಳಾಗಿರುವ ಭತ್ತದ ಗದ್ದೆ