ಕರ್ನಾಟಕ

karnataka

ETV Bharat / state

ತಂಗಿಯ ಒಡವೆಯೊಂದಿಗೆ ಅಕ್ಕ ಪರಾರಿ: ತಂದೆಯಿಂದ ದೂರು ದಾಖಲು - Mangaluru theft news

ತಂಗಿಯ ಒಡವೆಗಳನ್ನು ಕಳ್ಳತನ ಮಾಡಿದ ಅಕ್ಕ ಪರಾರಿಯಾಗಿರುವ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಆಕೆಯ ತಂದೆ ದೂರು ನೀಡಿದ್ದಾರೆ.

mangaluru
ತಂಗಿಯ ಒಡವೆಯೊಂದಿಗೆ ಅಕ್ಕ ಪರಾರಿ

By

Published : Jul 30, 2021, 7:02 AM IST

ಮಂಗಳೂರು: ಇತ್ತೀಚೆಗೆ ವಿವಾಹ ಆಗಿರುವ ತಂಗಿಯ ಒಡವೆಯನ್ನು ತೆಗೆದುಕೊಂಡು ಅಕ್ಕ ಪರಾರಿಯಾಗಿದ್ದು, ಆಕೆಯನ್ನು ಹುಡುಕಿ ಕೊಡಿ ಎಂದು ತಂದೆ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ನಗರದಲ್ಲಿ ನಡೆದಿದೆ. ಸುರತ್ಕಲ್ ಠಾಣಾ ವ್ಯಾಪ್ತಿಯ ಇಬ್ರಾಹಿಂ ಎಂಬವರ ಪುತ್ರಿ ರಿಜ್ವಾನಾ ಒಡವೆಯೊಂದಿಗೆ ಪರಾರಿಯಾದವಳು.

ಪಿರ್ಯಾದಿ ಇಬ್ರಾಹಿಂ ಅವರ ಹಿರಿಯ ಪುತ್ರಿಯಾದ ವರ್ಷ ರಿಜ್ವಾನಾ ಶಿಕ್ಷಕಿಯಾಗಿದ್ದು, ಗಂಡ ದುಬೈನಲ್ಲಿರುವುದರಿಂದ ಆಕೆ ತನ್ನ ತಂದೆಯ ಮನೆಯಲ್ಲಿಯೇ ಉಳಿದುಕೊಂಡಿದ್ದಳು. ರಿಜ್ವಾನಾ ತಂಗಿ ರಾಝ್ವಿನಾಳಿಗೆ ಮಾರ್ಚ್ ತಿಂಗಳಲ್ಲಿ ಮದುವೆಯಾಗಿದ್ದು, ಆಕೆಯ ಒಡವೆಗಳು ತಂದೆಯ ಮನೆಯಲ್ಲಿಯೇ ಇತ್ತು.

ಒಡವೆಗಳಿದ್ದ ಕಪಾಟಿನ ಕೀ ಹಿರಿಯ ಮಗಳಾದ ರಿಜ್ವಾನಾಳ ಬಳಿಯೇ ಇತ್ತು. ಇನ್ನು ಜುಲೈ 26ರಂದು ಬೆಳಗ್ಗೆ ಹಣದ ಅವಶ್ಯಕತೆ ಇದ್ದ ಕಾರಣ ಒಡವೆಗಳನ್ನು ಅಡವಿರಿಸಲು ಕಪಾಟಿನ ಕೀಯನ್ನು ಇಬ್ರಾಹಿಂ ಅವರು ಕೇಳಿದಾಗ ರಿಜ್ವಾನಾಳು ಕೊಡಲು ನಿರಾಕರಿಸಿದ್ದಳು.

ಆ ಬಳಿಕ ಆಕೆ ಶಿಕ್ಷಕಿಯಾಗಿದ್ದ ಚೊಕ್ಕಬೆಟ್ಟುವಿನ ಜಾಮೀಯಾ ಇಂಗ್ಲೀಷ್ ಮೀಡಿಯಂ ಶಾಲೆಗೆ ಹೋಗುತ್ತೇನೆ ಎಂದು ಹೇಳಿ ಹೊರಟಿದ್ದಾಳೆ. ಆದರೆ, ಆಕೆ ಮೊಬೈಲ್ ಫೋನ್​​ ಸ್ವಿಚ್ಡ್​​ ಆಫ್ ಮಾಡಿ ಪರಾರಿಯಾಗಿದ್ದಾಳೆ. ಇನ್ನು ಮರುದಿನ ಕಪಾಟಿನ ಬಾಗಿಲು ಒಡೆದು ನೋಡಿದಾಗ ಅದರಲ್ಲಿ ಒಡವೆಗಳು ಇರಲಿಲ್ಲ.

ಸದ್ಯ ರಿಜ್ವಾನಾಳಿಗೆ ಕೃಷ್ಣಾಪುರದ ಬಶೀರ್ ಎಂಬಾತನೊಂದಿಗೆ ಪ್ರೀತಿಯಿದ್ದು, ಆತನೊಂದಿಗೆ ಒಡವೆ ಜೊತೆಯಲ್ಲಿ ಪರಾರಿಯಾಗಿದ್ದಾಳೆಂದು ಇಬ್ರಾಹಿಂ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ABOUT THE AUTHOR

...view details