ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ, ವಿಜಯಾಬ್ಯಾಂಕ್ ಪೀಠ ಪರಿಸರ ವಿಜ್ಞಾನ ಮತ್ತು ಪರಿಸರ ಹಾಗೂ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ ಇದರ ಸಹಯೋಗದಲ್ಲಿ ಪರಿಸರ ಸ್ನೇಹಿ ಮಡಿಕೆ ಗೊಬ್ಬರ ತಯಾರಿಕೆ ಹಾಗೂ ವಾಣಿಜ್ಯ ಬೆಳೆಗಳ ಕಸಿಕಟ್ಟುವಿಕೆ ಮತ್ತು ಕೃಷಿ ಕಾರ್ಯಗಾರ ಕಾರ್ಯಕ್ರಮವನ್ನು ಮಂಗಳೂರು ರಾಮಕೃಷ್ಣ ಮಿಷನ್ನ ಏಕಗಮ್ಯಾನಂದ ಸ್ವಾಮೀಜಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ನಮಗೆ ಸ್ವಚ್ಚತೆಯ ಅರಿವಿದೆ, ಆದರೆ ತ್ಯಾಜ್ಯ ನಿರ್ವಹಣೆಯ ಅರಿವಿನ ಕೊರತೆ ಕಂಡುಬರುತ್ತಿದೆ. ನಾವು ಸ್ವಚ್ಚತೆಯ ಹೆಸರಿನಲ್ಲಿ ಕಸವನ್ನು ಸಂಗ್ರಹಿಸಿ ಕೊಡುತ್ತೇವೆ. ಕಸವು ಕೇಂದ್ರಿಕೃತವಾಗಿ ಊರ ಹೊರಗಿನ ನೂರಾರು ಎಕರೆ ಪ್ರದೇಶದಲ್ಲಿ ಸುರಿಯಲ್ಪಟ್ಟು ನೆಲ ಜಲವನ್ನು ಕಲುಷಿತಗೊಳಿಸಿ ವ್ಯಾಪಕವಾಗಿ ಪರಿಸರ ಹಾನಿಗೆ ಕಾರಣವಾಗುತ್ತಿದೆ ಎಂದು ಹೇಳಿದರು.