ಮಂಗಳೂರು:ಒಂದು ತಿಂಗಳ ರಂಜಾನ್ ಉಪವಾಸ ಮುಗಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಬಾಂಧವರು ಇಂದು ಸರಳವಾಗಿ ಈದುಲ್ ಫಿತ್ರ್ (ರಂಜಾನ್) ಹಬ್ಬ ಆಚರಣೆ ಮಾಡಿದರು.
ಕೋವಿಡ್ ಲಾಕ್ಡೌನ್ ಹಿನ್ನೆಲೆ ರಾಜ್ಯಾದ್ಯಂತ ಮಸೀದಿ, ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧವಿದೆ. ಹಾಗಾಗಿ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ಈದ್ ನಮಾಜ್ ಮಾಡಿ ಸರಳವಾಗಿ ಸಂಭ್ರಮಾಚರಣೆ ಮಾಡಿದರು.