ಬಂಟ್ವಾಳ/ಮಂಗಳುರು : ನಗರದಲ್ಲಿ ಕಾರ್ಡಿಯಾಲಜಿ ಎಟ್ ಡೋರ್ ಸ್ಟೆಪ್ಸ್ ಫೌಂಡೇಶನ್ (ಕ್ಯಾಡ್) ಯೋಜನೆಯಡಿ ಕೆಎಂಸಿಯ ಹೃದ್ರೋಗ ತಜ್ಞರಾದ ಡಾ. ಪದ್ಮನಾಭ ಕಾಮತ್ ,5 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರಗಳನ್ನ ಉಚಿತವಾಗಿ ನೀಡಿದ್ದಾರೆ.
ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಸಿಜಿ ಯಂತ್ರಗಳನ್ನ ವಿತರಿಸಿದ್ದು, ಬಂಟ್ವಾಳ ಆಸ್ಪತ್ರೆಗೆ 2, ಇತರೆ ಆಸ್ಪತ್ರೆಗಳಿಗೆ ಮೂರು ಯಂತ್ರಗಳನ್ನು ವಿತರಿಸಲಾಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ತಹಶೀಲ್ದಾರ್ ರಶ್ಮಿ ಎಸ್.ಆರ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಪುಷ್ಪಲತಾ ಅವರಿಗೆ ಕ್ಯಾಡ್ ನ ಪರವಾಗಿ ಕೆಎಂಸಿ ಮಾರ್ಕೆಟಿಂಗ್ ವಿಭಾಗದ ಪ್ರದೀಪ್ ನಾಯಕ್ ಯಂತ್ರಗಳನ್ನು ಹಸ್ತಾಂತರಿಸಿದರು.