ಕರ್ನಾಟಕ

karnataka

By

Published : Aug 14, 2022, 9:27 PM IST

ETV Bharat / state

ಸುಳ್ಯ ತಾಲೂಕಿನಲ್ಲಿ ಮತ್ತೆ ಕಂಪಿಸಿದ ಭೂಮಿ

ಸುಳ್ಯದ ಕಲ್ಮಕಾರಿನ ಮೆಂಟೆಕಜೆ, ಗುಳಿಕ್ಕಾನ ಪ್ರದೇಶದಲ್ಲಿ ಶಬ್ದ ಹಾಗೂ ಕಂಪನ ಹೆಚ್ಚಾಗಿ ಅನುಭವವಾಗಿದ್ದು, ಕೊಲ್ಲಮೊಗ್ರದವರೆಗೂ ಶಬ್ದ ಕೇಳಿಸಿದೆ ಎನ್ನಲಾಗಿದೆ.

Earthquake in Sulya Taluk
Earthquake in Sulya Taluk

ಸುಳ್ಯ: ತಾಲೂಕಿನ ಕಲ್ಮಕಾರು ಸೇರಿದಂತೆ ಸುಳ್ಯದ ಗಡಿ ಪ್ರದೇಶಗಳು ಮತ್ತು ಕೊಡಗಿನ ಹಲವು ಕಡೆಗಳಲ್ಲಿ ಭಾನುವಾರ ಸಂಜೆ 6.15ರ ಸುಮಾರಿಗೆ ದೊಡ್ಡ ಶಬ್ದದೊಂದಿಗೆ ಭೂಮಿ ಕಂಪಿಸಿದೆ ಎನ್ನಲಾಗುತ್ತಿದೆ. ಭೂ ವಿಜ್ಞಾನ ಅಧಿಕಾರಿಗಳು ಈ ಬಗ್ಗೆ ಇನ್ನೂ ದೃಢಪಡಿಸಿಲ್ಲ.

ಸ್ಥಳೀಯರು ತಮಗಾದ ಅನುಭವವನ್ನು ಮಾಧ್ಯಮ ಪ್ರತಿನಿಧಿಗಳ ಗಮನಕ್ಕೆ ತಂದಿದ್ದಾರೆ. ಸುಳ್ಯದ ಕಲ್ಮಕಾರಿನ ಮೆಂಟೆಕಜೆ, ಗುಳಿಕ್ಕಾನ ಪ್ರದೇಶದಲ್ಲಿ ಶಬ್ದ ಹಾಗೂ ಕಂಪನ ಹೆಚ್ಚಾಗಿ ಅನುಭವವಾಗಿದೆ. ಕೊಲ್ಲಮೊಗ್ರದವರೆಗೂ ಈ ಶಬ್ದ ಕೇಳಿಸಿದೆ ಎನ್ನಲಾಗಿದೆ. ಮಾತ್ರವಲ್ಲದೇ ಕಲ್ಲುಗುಂಡಿಯ ಚಟ್ಟೆಕಲ್ಲು, ಕೊಯನಾಡಿನ ಮಂಗಳಪಾರೆ ಎಂಬಲ್ಲಿ ಭೂಮಿ ಕಂಪಿಸಿದೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ.

ಕಳೆದ ಕೆಲವು ತಿಂಗಳ ಹಿಂದೆ ಸುಳ್ಯ ತಾಲೂಕಿನಲ್ಲಿ ಸುಮಾರು 7ರಿಂದ 8 ಬಾರಿ ಭೂಮಿ ಕಂಪಿಸಿತ್ತು. ಚೆಂಬು, ಅರಂತೋಡು ಪ್ರದೇಶಗಳು ಈ ಕೆಲವು ಕಂಪನಗಳ ಕೇಂದ್ರ ಬಿಂದುವಾಗಿತ್ತು. ಇದೀಗ ಮತ್ತೆ ದಕ್ಷಿಣ ಕನ್ನಡ ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಭೂಮಿ ಕಂಪಿಸಿದ್ದು, ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಆರೇಳು ತಿಂಗಳಲ್ಲಿ ನಿಮ್ಮ ಕುಮಾರಸ್ವಾಮಿಯೇ ಮುಖ್ಯಮಂತ್ರಿ: ಹೆಚ್​​ಡಿಕೆ

ABOUT THE AUTHOR

...view details