ಉಳ್ಳಾಲ(ಮಂಗಳೂರು): ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಿ, ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವಂತೆ ಡಿವೈಎಫ್ಐ ಆಗ್ರಹಿಸಿದೆ. ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜ್ ಸ್ಥಾಪಿಸಿ ಕೋವಿಡ್ ರೋಗಿಗಳಿಗೆ ಉಚಿತ ಗುಣಮಟ್ಟದ ಚಿಕಿತ್ಸೆ ನೀಡಿ ಹಾಗೂ ಕೋವಿಡ್ ಭ್ರಷ್ಟಾಚಾರದ ತನಿಖೆ ಮಾಡಿ ಎಂದು ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ವತಿಯಿಂದ ಪ್ರತಿಭಟನಾ ಪ್ರದರ್ಶನ ನಡೆಯಿತು.
ಸರಕಾರ ಆರೋಗ್ಯ ಕ್ಷೇತ್ರವನ್ನು ಖಾಸಗಿ ತೆಕ್ಕೆಯಿಂದ ತೆಗೆದು ತನ್ನ ತೆಕ್ಕೆಯಲ್ಲಿ ಇರಿಸಿದರೆ ಸಾವಿನ ಸಂಖ್ಯೆ ಕಡಿಮೆಯಾಗಬಹುದು. ಆರೋಗ್ಯ ಕ್ಷೇತ್ರವನ್ನು ಸರಕಾರಿ ಆರೋಗ್ಯ ಕ್ಷೇತ್ರ ಮಾಡಬೇಕು. ಹೊರ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಆಗುತ್ತದೆ. ಆದರೆ ನಮ್ಮ ಜಿಲ್ಲೆಗೆ ಮಾತ್ರ ಸರಕಾರಿ ಮೆಡಿಕಲ್ ಕಾಲೇಜು ಬರುತ್ತಿಲ್ಲ. ಶಾಸಕ, ಸಂಸದರೇ ನೀವು ಖಾಸಗಿ ಆಸ್ಪತ್ರೆ ಪ್ರತಿನಿಧಿಯಲ್ಲ, ಜನಪ್ರತಿನಿಧಿಗಳು ಎಂದು ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಬಿ.ಕೆ ಇಂತಿಯಾಝ್ ಹೇಳಿದರು.