ಮಂಗಳೂರು: ದುಬೈನಿಂದ ಮೇ 14ರ ಬದಲು ಮೇ 12ರಂದೇ ವಿದೇಶದಲ್ಲಿರುವ ಕರಾವಳಿಗರು ಮಂಗಳೂರಿಗೆ ಬರಲಿದ್ದಾರೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.
ಮೇ 12ರಂದು ದುಬೈನಲ್ಲಿರುವ ಕರಾವಳಿಗರು ಮಂಗಳೂರಿಗೆ ವಾಪಸ್: ಸದಾನಂದಗೌಡ - air india special evacuation flight
ಟ್ವೀಟ್ ಮಾಡಿರುವ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ, ಇದೇ ಮೇ 12ರಂದು ವಿದೇಶದಲ್ಲಿರುವ 177 ಕರಾವಳಿಗರು ಮಂಗಳೂರಿಗೆ ಬರಲಿದ್ದಾರೆ ಎಂದು ತಿಳಿಸಿದ್ದಾರೆ.
![ಮೇ 12ರಂದು ದುಬೈನಲ್ಲಿರುವ ಕರಾವಳಿಗರು ಮಂಗಳೂರಿಗೆ ವಾಪಸ್: ಸದಾನಂದಗೌಡ DV Sadananda Gowda Tweet about special flight](https://etvbharatimages.akamaized.net/etvbharat/prod-images/768-512-7132913-2-7132913-1589042217451.jpg)
ಸಂಗ್ರಹ ಚಿತ್ರ
ಮೇ 12ರಂದೇ ವಿಮಾನದ ಮೂಲಕ ಕರಾವಳಿಯ ವಿದೇಶಿ ಭಾರತೀಯರನ್ನು ಕರೆ ತರಲು ಏರ್ ಇಂಡಿಯಾ ಒಪ್ಪಿಗೆ ನೀಡಿದೆ. ಏರ್ ಇಂಡಿಯಾದ IX0384 ಸಂಖ್ಯೆಯ ವಿಮಾನದ ಮೂಲಕ ದುಬೈನಿಂದ ಮಂಗಳೂರಿಗೆ 177 ಮಂದಿ ಕನ್ನಡಿಗರು ಮಾತ್ರ ಪ್ರಯಾಣಿಸಲಿದ್ದಾರೆ. ಕಾಸರಗೋಡು ಭಾಗದ ಪ್ರಯಾಣಿಕರಿಗೆ ಈ ವಿಮಾನದಲ್ಲಿ ಬರಲು ಅವಕಾಶವಿಲ್ಲ.
ಅಂದು ಭಾರತೀಯ ಕಾಲಮಾನ ಸಂಜೆ 4.10ಕ್ಕೆ ಹೊರಡಲಿರುವ ವಿಮಾನ, ರಾತ್ರಿ ಸುಮಾರು 9.30ರ ವೇಳೆಗೆ ಮಂಗಳೂರು ತಲುಪಲಿದೆ. ದ.ಕ, ಉಡುಪಿ ಮತ್ತು ಉತ್ತರ ಕನ್ನಡ ಭಾಗದ ಪ್ರಯಾಣಿಕರು ಈ ವಿಮಾನದ ಮೂಲಕ ಕರಾವಳಿಗೆ ಬರಲಿದ್ದಾರೆ.