ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಬಂದ ಪ್ರಯಾಣಿಕನೋರ್ವನಿಂದ 4.65 ಲಕ್ಷ ರೂ. ಮೌಲ್ಯದ ಚಿನ್ನವನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ದುಬೈ ಪ್ರಯಾಣಿಕನಿಂದ 4.65 ಲಕ್ಷ ಮೌಲ್ಯದ ಚಿನ್ನ ವಶ - dubai
ದುಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನೋರ್ವನಿಂದ ಭಾರೀ ಮೌಲ್ಯದ ಚಿನ್ನವಶಕ್ಕೆ ಪಡೆಯಲಾಗಿದೆ.
ಭಾರೀ ಮೌಲ್ಯದ ಚಿನ್ನವಶ
ದುಬೈನಿಂದ ಬಂದ ಸ್ಪೈಸ್ ಜೆಟ್ ವಿಮಾನದಲ್ಲಿ ಪ್ರಯಾಣಿಕನ ಲಗೇಜ್ ತಪಾಸಣೆ ಮಾಡಿದಾಗ ಆತನ ಲಗೇಜ್ನಲ್ಲಿ 4 ಮ್ಯಾಗ್ನೆಟಿಕ್ ಬ್ರಾಸ್ಲೆಟ್ಗಳಲ್ಲಿ 32 ಮರ್ಕ್ಯೂರಿ ಕೋಟೆಡ್ ಬಂಗಾರದ ತುಂಡುಗಳನ್ನು ಅಡಗಿಸಿಡಲಾಗಿತ್ತು. ಇದನ್ನು ಪತ್ತೆ ಹಚ್ಚಿದ ಕಸ್ಟಮ್ಸ್ ಅಧಿಕಾರಿಗಳು ಬಂಗಾರವನ್ನು ವಶಪಡಿಸಿಕೊಂಡು ಪ್ರಯಾಣಿಕನನ್ನು ಬಂಧಿಸಿದ್ದಾರೆ.