ಕರ್ನಾಟಕ

karnataka

ETV Bharat / state

ಗಾಂಜಾ ಮಾರಾಟ ಜಾಲ: ಮಂಗಳೂರು ಪೊಲೀಸರಿಂದ ನಾಲ್ವರ ಬಂಧನ, ಮಾಲು ವಶ - Latest News In Mangalore Drugs

ಗಾಂಜಾ ಮಾರಾಟ ಜಾಲದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿರುವ ಮಂಗಳೂರು ನಗರ ಪೊಲೀಸರು ಇಂದು ನಗರದ ತೊಕ್ಕೊಟ್ಟುವಿನಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಗಾಂಜಾ ಮಾರಾಟ ಜಾಲ ಭೇದಿಸಿದ ಮಂಗಳೂರು ಪೊಲೀಸ

By

Published : Nov 6, 2019, 4:03 PM IST

ಮಂಗಳೂರು:ಅಕ್ರಮ ಗಾಂಜಾ ಮಾರಾಟದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿರುವ ಮಂಗಳೂರು ನಗರ ಪೊಲಿಸರು ಇಂದು ನಗರದ ತೊಕ್ಕೊಟ್ಟುವಿನಲ್ಲಿ ಗಾಂಜಾ ವ್ಯವಹಾರದಲ್ಲಿ ನಿರತರಾಗಿದ್ದ ಪ್ರಮುಖ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಭಾರಿ ಪ್ರಮಾಣದ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ತಿಳಿಸಿದ್ರು.

ಗಾಂಜಾ ಮಾರಾಟ ಜಾಲ ಭೇದಿಸಿದ ಮಂಗಳೂರು ಪೊಲೀಸರು

ಕಾಸರಗೋಡು ಮಂಜೇಶ್ವರದ ಅಬೂಬಕ್ಕರ್ ಸಮದ್ (24), ಮುಹಮ್ಮದ್ ಅಶ್ರಫ್ (30), ಮುಹಮ್ಮದ್ ಅಫ್ರಿದ್ (22), ಮುಹಮ್ಮದ್ ಅರ್ಷದ್ (18) ಬಂಧಿತರು. ಬಂಧಿತರಿಂದ 2 ಲಕ್ಷ ರೂ ಮೌಲ್ಯದ 10 ಕೆಜಿ ಗಾಂಜಾ, ಒಂದು ಕಾರು, ಒಂದು ಸ್ಕೂಟರ್ ಮತ್ತು ಮೂರು ಮೊಬೈಲ್ ಪೋನ್ ವಶಪಡಿಸಿಕೊಳ್ಳಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಯುಕ್ತರು, ನಾಲ್ವರು ಆರೋಪಿಗಳು ಕೇರಳ ಮೂಲದವರಾಗಿದ್ದು ಕೇರಳದಿಂದ ಮುಂಬೈವರೆಗೆ ಗಾಂಜಾ ಮಾರಾಟದಲ್ಲಿ ತೊಡಗಿಸಿಕೊಂಡಿದ್ದರು. ಅಕ್ರಮ ಗಾಂಜಾ ಮಾರಾಟದ ವಿರುದ್ದ ನಿರಂತರವಾಗಿ ದಾಳಿ ಮುಂದುವರಿಯಲಿದ್ದು, ಮುಂದೆ ನ್ಯಾಯಾಲಯದ ಸರ್ಚ್ ವಾರಂಟ್ ಪಡೆದು ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್, ಕ್ಯಾಂಟಿನ್, ಪಿಜಿಗಳಿಗೆ ದಾಳಿ ಮಾಡಲಾಗುವುದು. ಸಂಸ್ಥೆಯ ಘನತೆಗೆ ಕುಂದು ಬರುವ ಮುನ್ನ ಆಯಾ ಸಂಸ್ಥೆಗಳು ಎಚ್ಚೆತ್ತುಕೊಂಡು ಅಮಲು ಪದಾರ್ಥದ ಬಳಕೆಯ ನಿಗ್ರಹಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಆಯುಕ್ತ ಡಾ. ಪಿ.ಎಸ್‌. ಹರ್ಷ ಎಚ್ಚರಿಸಿದ್ದಾರೆ.

ABOUT THE AUTHOR

...view details