ಕರ್ನಾಟಕ

karnataka

ETV Bharat / state

ಬಸ್​ನಲ್ಲಿ ಡ್ರಗ್ಸ್ ಜಾಗೃತಿ ಬರಹ... ದಿಲ್ ರಾಜ್ ಆಳ್ವ ಸಾಮಾಜಿಕ ಕಾಳಜಿ - Bus Owner Dil Raj

ಬಸ್​ನ ಎರಡೂ ಬದಿಗಳಲ್ಲಿಯೂ ಆರೋಗ್ಯದ ಬಗ್ಗೆ ಕಾಳಜಿ, ಡ್ರಗ್ಸ್ ಸೇವನೆಯಿಂದ ಮರಣ ಸಂಭವಿಸುತ್ತದೆ, ಕುಟುಂಬಕ್ಕೂ ತೊಂದರೆ ಎಂಬ ಜಾಗೃತಿ ಬರಹಗಳನ್ನು ಬರೆಯಲಾಗಿದೆ. ಈ ಹಿಂದೆಯೂ ದಿಲ್ ರಾಜ್ ಆಳ್ವ ಅವರು ತಮ್ಮ ಬಸ್​ಗಳಲ್ಲಿ ತುಳುಲಿಪಿ ಕಲಿಕೆ, ನೀರಿನ ಉಳಿತಾಯ, ಸ್ವಚ್ಛ ಭಾರತದ ಬಗ್ಗೆಯೂ ಜಾಗೃತಿ ಬರಹಗಳನ್ನು ಬರೆಸಿದ್ದರು‌..

Bus Owner Dil Raj
ಬಸ್​ನಲ್ಲಿ ಡ್ರಗ್ಸ್ ಜಾಗೃತಿ ಬರಹ

By

Published : Oct 20, 2020, 5:02 PM IST

Updated : Oct 20, 2020, 8:00 PM IST

ಮಂಗಳೂರು: ಬಸ್ ಇರೋದು ಪ್ರಯಾಣಕ್ಕೆ ಮಾತ್ರವಲ್ಲ. ಅದರಿಂದ ಜಾಗೃತಿಯನ್ನು ಮೂಡಿಸಬಹುದು ಎಂದು ಮಂಗಳೂರಿನ ಖಾಸಗಿ ಬಸ್ ಮಾಲೀಕರೊಬ್ಬರು ಸಾಧಿಸಿ ತೋರಿಸಿದ್ದಾರೆ. ಬಸ್​ನಿಂದ ಹೇಗೆ ಜಾಗೃತಿ ಮೂಡಿಸೋದು ಅಂತಾ ಯೋಚಿಸುತ್ತಿದ್ದೀರಾ.. ಹಾಗಾದರೆ, ಈ ಸುದ್ದಿ ನೋಡಿ.

ಇತ್ತೀಚೆಗೆ ಸಾಕಷ್ಟು ಡ್ರಗ್ಸ್ ಪ್ರಕರಣ ಪತ್ತೆಯಾಗುತ್ತಿವೆ. ಸೆಲೆಬ್ರಿಟಿಗಳೂ ಜೈಲು ಪಾಲಾಗಿರೋದು ಎಲ್ಲರಿಗೂ ತಿಳಿದಿದೆ. ಆದ್ದರಿಂದ ಮಂಗಳೂರಿನ ಬಸ್ ಮಾಲೀಕ ದಿಲ್ ರಾಜ್ ಆಳ್ವ ಅವರು ಡ್ರಗ್ಸ್ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಬರಹಗಳನ್ನು ‌ತಮ್ಮ ಬಸ್​ನಲ್ಲಿ ಬರೆಸಿದ್ದಾರೆ.

ದಿಲ್ ರಾಜ್ ಆಳ್ವ ಅವರು ನಗರದ ಸ್ಟೇಟ್ ಬ್ಯಾಂಕ್​ನಿಂದ ಮಂಗಳಾದೇವಿಯ ನಡುವೆ ಸಂಚರಿಸುವ 'ಶ್ರೀ ಗಣೇಶ್ ಪ್ರಸಾದ್' ಎಂಬ 27 ನಂಬರ್ ಬಸ್​ನಲ್ಲಿ‌ ಡ್ರಗ್ಸ್ ಜಾಗೃತಿ ಬರಹ ಬರೆಸಿದ್ದಾರೆ. ಬಸ್​ನ ಎರಡೂ ಬದಿಗಳಲ್ಲಿಯೂ ಆರೋಗ್ಯದ ಬಗ್ಗೆ ಕಾಳಜಿ, ಡ್ರಗ್ಸ್ ಸೇವನೆಯಿಂದ ಮರಣ ಸಂಭವಿಸುತ್ತದೆ, ಕುಟುಂಬಕ್ಕೂ ತೊಂದರೆ ಎಂಬ ಜಾಗೃತಿ ಬರಹಗಳನ್ನು ಬರೆಯಲಾಗಿದೆ. ಈ ಹಿಂದೆಯೂ ದಿಲ್ ರಾಜ್ ಆಳ್ವ ಅವರು ತಮ್ಮ ಬಸ್​ಗಳಲ್ಲಿ ತುಳುಲಿಪಿ ಕಲಿಕೆ, ನೀರಿನ ಉಳಿತಾಯ, ಸ್ವಚ್ಛ ಭಾರತದ ಬಗ್ಗೆಯೂ ಜಾಗೃತಿ ಬರಹಗಳನ್ನು ಬರೆಸಿದ್ದರು‌.

ಬಸ್​ನಲ್ಲಿ ಡ್ರಗ್ಸ್ ಜಾಗೃತಿ ಬರಹ

ಈ ಬಗ್ಗೆ ಬಸ್ ಮಾಲೀಕ ದಿಲ್ ರಾಜ್ ಆಳ್ವ ಮಾತನಾಡಿ, ಕಳೆದ ನಾಲ್ಕೈದು ವರ್ಷಗಳಿಂದ ಸಾಮಾಜಿಕ ಜಾಗೃತಿ ಮೂಡಿಸುವ ಬರಹಗಳನ್ನು ನಮ್ಮ ಬಸ್​ಗಳಲ್ಲಿ ಬರೆಸುತ್ತಿದ್ದೇನೆ. ಪ್ರಸ್ತುತ ಯುವ ಜನತೆ ಡ್ರಗ್ಸ್​ಗಳಿಗೆ ಬಲಿ ಬೀಳುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ದನಿ ಎತ್ತಬೇಕು ಎಂಬ ದೃಷ್ಟಿಯಿಂದ ಡ್ರಗ್ಸ್ ಜಾಗೃತಿ ಬರಹಗಳನ್ನು ಬಸ್​ನಲ್ಲಿ ಬರೆಸಲಾಗಿದೆ. ಈ ಜಾಗೃತಿ ಬರಹ ಸರ್ಕಾರದ ಮಟ್ಟಕ್ಕೂ ತಲುಪಬೇಕೆನ್ನುವ ಎಂಬ ಚಿಂತನೆಯಿದ್ದು, ಈ ಮೂಲಕ ಡ್ರಗ್ಸ್ ಪ್ರಕರಣಗಳಿಗೆ ಕಡಿವಾಣ ಹಾಕಲು ಕಠಿಣ ಕಾನೂನು ಕ್ರಮಗಳು ಜಾರಿಯಾಗಬೇಕು. ಆಗ ಮಾತ್ರ ಯುವ ಜನತೆ ಈ ಕಡೆ ವಾಲುವಂತದ್ದು ಕಡಿಮೆಯಾಗುತ್ತದೆ ಎಂದು ಹೇಳಿದರು.

Last Updated : Oct 20, 2020, 8:00 PM IST

ABOUT THE AUTHOR

...view details