ಕರ್ನಾಟಕ

karnataka

ETV Bharat / state

ಮಂಗಳೂರು ಬಳಿ ಕಾರು-ಬಸ್​​​​​​​​ ಡಿಕ್ಕಿ: ಕಾರು ಚಾಲಕ ಸಾವು - ಮಂಗಳೂರು ಬಳಿ-ಕಾರು-ಬಸ್​​ ಅಪಘಾತ ಸುದ್ದಿ

ಮಂಗಳೂರು ಬಳಿಯ ಕೆತ್ತಿಕಲ್ ಎಂಬಲ್ಲಿ ಕಾರು ಮತ್ತು ಬಸ್ ನಡುವೆ ಡಿಕ್ಕಿಯಾಗಿ ಬಸ್ ಪಲ್ಟಿಯಾಗಿ ಹೊಂಡಕ್ಕೆ ಬಿದ್ದಿದೆ.

bus
ಕಾರು ಚಾಲಕ ದುರ್ಮರಣ

By

Published : Dec 28, 2019, 7:47 PM IST

ಮಂಗಳೂರು:ನಗರದ ಹೊರವಲಯದ ಕೆತ್ತಿಕಲ್ ಎಂಬಲ್ಲಿ ಕಾರು ಮತ್ತು ಬಸ್ ನಡುವೆ ಅಪಘಾತವಾಗಿ ಬಸ್ ಪಲ್ಟಿಯಾಗಿ ಹೊಂಡಕ್ಕೆ ಬಿದ್ದ ಘಟನೆ ನಡೆದಿದೆ.

ಕಾರು ಚಾಲಕ ದುರ್ಮರಣ

ಅಪಘಾತದಲ್ಲಿ ಕಾರು ಚಾಲಕ ವರ್ನನ್ ಬ್ರಾಯನ್ ಸಲ್ವಡೋರ್ ಡಿಸಿಲ್ವ ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್​​ನಲ್ಲಿದ್ದ ಹಲವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಡಬಿದ್ರೆಯಿಂದ ಮಂಗಳೂರಿಗೆ ಬರುತ್ತಿದ್ದ ಬಸ್ ಕೆತ್ತಿಕಲ್ ಬಳಿ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದೆ. ನಿಯಂತ್ರಣ ತಪ್ಪಿದ ಬಸ್ ಪಕ್ಕದಲ್ಲಿದ್ದ ಹೊಂಡಕ್ಕೆ ಬಿದ್ದಿದೆ. ಬಸ್​​ ಮೇಲಕ್ಕೆತ್ತಲಾಗಿದ್ದು, ಬಸ್​​​ನಲ್ಲಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details