ಉಳ್ಳಾಲ (ದಕ್ಷಿಣಕನ್ನಡ):ಹರೇಕಳದ ಶ್ರೀ ರಾಮಕೃಷ್ಣ ಪ್ರೌಢಶಾಲೆಯ 'ವಿದ್ಯಾಗಮ' ಮಕ್ಕಳ ನಿರಂತರ ಕಲಿಕಾ ಕಾರ್ಯಕ್ರಮಕ್ಕೆ ಸಂಸ್ಥೆಯ ಸಂಚಾಲಕ ಜಯರಾಮ ಆಳ್ವ ಪೋಡಾರು ಚಾಲನೆ ನೀಡಿದರು.
ಹರೇಕಳ ಶಾಲೆಯ 'ವಿದ್ಯಾಗಮ' ಕಾರ್ಯಕ್ರಮಕ್ಕೆ ಚಾಲನೆ - 'Vidyagama' program
ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲದ ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ವಿದ್ಯಾಗಮ ಕಾರ್ಯಕ್ರಮಕ್ಕೆ ಸಂಸ್ಥೆ ಸಂಚಾಲಕ ಜಯರಾಮ ಆಳ್ವ ಪೋಡಾರು ಚಾಲನೆ ನೀಡಿದರು.
ಹರೇಕಳ ಶಾಲೆಯ 'ವಿದ್ಯಾಗಮ' ಕಾರ್ಯಕ್ರಮಕ್ಕೆ ಚಾಲನೆ
ಬಳಿಕ ಮಾತನಾಡಿದ ಅವರು, ಉತ್ತಮ ಶಿಕ್ಷಣ ಪಡೆದು ಭವಿಷ್ಯದಲ್ಲಿ ಯಶಸ್ವಿ ಜೀವನ ರೂಪಿಸಲು ವಿದ್ಯಾರ್ಥಿಗಳು ಶ್ರೀ ರಾಮಕೃಷ್ಣ ಪ್ರೌಢಶಾಲೆಗೆ ಸೇರ್ಪಡೆಗೊಳ್ಳುವ ಮೂಲಕ ಉತ್ತಮ ಆಯ್ಕೆಯನ್ನು ಮಾಡಿದ್ದಾರೆ. ಕೊರೊನಾ ಸಂಕಷ್ಟದ ನಡುವೆಯೂ ಸಂಸ್ಥೆಯ ಶಿಕ್ಷಕರ ಸಮಾಜಮುಖಿ ಕಾರ್ಯ ಶ್ಲಾಘನಾರ್ಹ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಪುರಸ್ಕಾರ ಪಡೆದ ವಿದ್ಯಾರ್ಥಿ ನಿಶಾನ್ ಮತ್ತು ನೂತನವಾಗಿ ದಾಖಲಾದ 8ನೇ ತರಗತಿಯ ಬಹುಮುಖ ಪ್ರತಿಭಾನ್ವಿತರನ್ನು ಗೌರವಿಸಲಾಯಿತು.