ಪುತ್ತೂರು:ನಡೆದಾಡುವ ವಿಶ್ವಕೋಶ ಡಾ. ಶಿವರಾಮ ಕಾರಂತರನ್ನು ಅರ್ಥೈಸಿಕೊಳ್ಳುವುದು ಸುಲಭದ ಮಾತಲ್ಲ. ಅವರ ಬದುಕಿನ ದಾರಿ, ಕಲೆ, ಸಾಹಿತ್ಯದ ಕುರಿತ ಸಂಪೂರ್ಣ ಚಿತ್ರಣವನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಪುತ್ತೂರಿನ ಬಾಲವನದಲ್ಲಿ ಪ್ರಯತ್ನಗಳು ಸಾಗುತ್ತಿದ್ದು, ಅವರ ಅಧ್ಯಯನಕ್ಕೆ ಪೂರಕವೆನಿಸಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಪರ್ಲಡ್ಕದ ಡಾ. ಶಿವರಾಮ ಕಾರಂತ ಬಾಲವನದಲ್ಲಿ ಕಾರಂತರ ಬಾಲವನದ ವೆಬ್‌ಸೈಟ್ ಅನಾವರಣಗೊಳಿಸಿ ಮಾತನಾಡಿದರು. ಕಾರಂತರು ತಮ್ಮ ಬದುಕಿನುದ್ದಕ್ಕೂ ನಡೆಸಿದ ಹೊಸ ಕಲ್ಪನೆ, ನಾಟಕ ರಚನೆ, ಕಲೆ, ಯಕ್ಷಗಾನ, ಸಾಹಿತ್ಯ ಮುಂದಿನ ಪೀಳಿಗೆಗೆಗೂ ತಿಳಿಯಬೇಕು. ಇದೀಗ ಅವರ ಬದುಕಿನ ಚಿತ್ರಣ ವೆಬ್‌ಸೈಟ್ ಮೂಲಕ ಅನಾವರಣಗೊಳ್ಳುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.