ಕರ್ನಾಟಕ

karnataka

ಶ್ರೀರಾಮಮಂದಿರದ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನೆರವೇರಲಿ : ಡಾ.ಡಿ.ವೀರೇಂದ್ರ ಹೆಗ್ಗಡೆ

By

Published : Aug 4, 2020, 9:15 PM IST

ಅಯೋಧ್ಯೆಯಲ್ಲಿ ಶ್ರೀರಾಮ‌ ಮಂದಿರ ನಿರ್ಮಾಣ ಕಾರ್ಯ ಅತೀ ಅಗತ್ಯವಾಗಿದೆ. ಭಾರತೀಯರಾದ ನಮಗೆಲ್ಲರಿಗೂ ಇದು ಶುಭ ಸುದ್ದಿ. ಆದ್ದರಿಂದ ನಿರ್ವಿಘ್ನವಾಗಿ ಮಂದಿರ ನಿರ್ಮಾಣವಾಗಲಿ..

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ (ದಕ್ಷಿಣ ಕನ್ನಡ) :ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣದ ಕಾರ್ಯ ನಿರ್ವಿಘ್ನವಾಗಿ ನಡೆಯುವಂತೆ ಶ್ರೀಮಂಜುನಾಥನಲ್ಲಿ‌ ಪ್ರಾರ್ಥಿಸುವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಹೇಳಿದರು.

ಆಗಸ್ಟ್‌ 5ರಂದು ಅಯೋಧ್ಯೆಯಲ್ಲಿ ನಡೆಯುವ ಭೂಮಿ‌ಪೂಜೆ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದ ಹೆಗ್ಗಡೆಯವರು ಧರ್ಮಸ್ಥಳದಿಂದಲೇ ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದಾರೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ

ಅಯೋಧ್ಯೆಯಲ್ಲಿ ಶ್ರೀರಾಮ‌ ಮಂದಿರ ನಿರ್ಮಾಣ ಕಾರ್ಯ ಅತೀ ಅಗತ್ಯವಾಗಿದೆ. ಭಾರತೀಯರಾದ ನಮಗೆಲ್ಲರಿಗೂ ಇದು ಶುಭ ಸುದ್ದಿ. ಆದ್ದರಿಂದ ನಿರ್ವಿಘ್ನವಾಗಿ ಮಂದಿರ ನಿರ್ಮಾಣವಾಗಲಿ ಎಂದು ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಕುಟುಂಬ ಸಮೇತ ಅಯೋಧ್ಯೆಗೆ ನಾನು ಹೋಗಿದ್ದೆ. ಅಯೋಧ್ಯೆಯ ಪುಣ್ಯ ಭೂಮಿಯನ್ನು ಸ್ಪರ್ಶಿಸಿದ್ದೇನೆ. ಅಂದು ಅಲ್ಲಿನ ಸಾಧು ಸಂತರನ್ನು ಗೌರವಿಸಿದ್ದು, ಅಯೋಧ್ಯೆಗಾಗಿ ತ್ಯಾಗ, ಬಲಿದಾನಗೈದ ಎಲ್ಲರಿಗೂ ಅಭಿವಂದನೆಗಳು. ಮುಂದೆಯೂ ಧರ್ಮ ಸೇವೆ ಮಾಡುವಂತಾಗಲಿ ಎಂದು ಅವರು ಹೇಳಿದರು.

ABOUT THE AUTHOR

...view details