ಕರ್ನಾಟಕ

karnataka

ETV Bharat / state

ಧರ್ಮಸ್ಥಳದ 'ಮಂಜೂಷಾ' ಸಂಗ್ರಹಾಲಯ ಸೇರಿದ ಎರಡು ಡಬಲ್ ಡೆಕ್ಕರ್ ಬಸ್!

ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಕ್ಷೇತ್ರ ಧರ್ಮಸ್ಥಳ ನೆಲ್ಯಾಡಿ ಬೀಡು ಬಳಿ ಇರುವ ವಾಹನ‌ ಸಂಗ್ರಹಾಲಯಕ್ಕೆ ಮುಂಬೈನಲ್ಲಿರುವ ಧರ್ಮಸ್ಥಳದ ಭಕ್ತರು ಸಂಗ್ರಹಿಸಿ ಕಳುಹಿಸಿದ ಎರಡು ಡಬಲ್ ಡೆಕ್ಕರ್ ಬಸ್‍ಗಳು ಆಗಮಿಸಿವೆ.

Dharmasthala
ಡಬಲ್ ಡೆಕ್ಕರ್ ಬಸ್

By

Published : Mar 9, 2021, 6:59 AM IST

ಬೆಳ್ತಂಗಡಿ: ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ಎರಡು ಹೊಸ ಡಬ್ಬಲ್ ಡೆಕ್ಕರ್ ಬಸ್​ಗಳು ಸೇರ್ಪಡೆಗೊಂಡಿದ್ದು, ಕಳೆ ಇನ್ನಷ್ಟು ಹೆಚ್ಚಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಚತುರ್ವಿಧ ದಾನಗಳು ನಡೆಯುವ ಜೊತೆಗೆ ಜ್ಞಾನ ದಾಹ ತಣಿಸುವ ವಿಚಾರಕ್ಕೂ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಭಕ್ತಿ ಸುಧೆ ಹರಿಸುವ ಜೊತೆಗೆ ಸಾಹಿತ್ಯ, ಸರ್ವಧರ್ಮ ಸಮನ್ವಯ, ಲಲಿತಕಲಾಗೋಷ್ಠಿಗಳು ಮೊದಲಾದವುಗಳಿಗೂ ವಿಶೇಷ ಆದ್ಯತೆ ನೀಡಲಾಗಿತ್ತು.

ಇದನ್ನು ಓದಿ: ಸಮಾರಂಭವೊಂದರಲ್ಲಿ ಎದುರುಬದುರಾದ ಹಾಲಿ, ಮಾಜಿ ಸಿಎಂಗಳು: ಬೆನ್ನುತಟ್ಟಿ ಮುಂದೆ ಸಾಗಿದ ರಾಜಾಹುಲಿ!

ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ವಸ್ತು ಸಂಗ್ರಹಾಲಯದಲ್ಲಿ ಸಾವಿರಾರು ವರ್ಷಗಳ ಹಿಂದಿನ ಪಳೆಯುಳಿಕೆಗಳಿಂದ ಹಿಡಿದು, ವಿದೇಶಗಳಲ್ಲಿ ‌ಲಭಿಸುವ ಕರಕುಶಲ ವಸ್ತುಗಳವರೆಗೆ ನೋಡಿದಷ್ಟು ಮುಗಿಯದ, ಆಸಕ್ತಿಕರ ವಿವಿಧ ವಸ್ತುಗಳ ಭಂಡಾರವೇ ಇದೆ. ಅದೇ ರೀತಿ, ನೆಲ್ಯಾಡಿ ಬೀಡು ಬಳಿ ಇರುವ ವಾಹನ‌ ಸಂಗ್ರಹಾಲಯವೂ ಅತ್ಯಮೂಲ್ಯ ವಾಹನಗಳ ದೊಡ್ಡ ಸಂಗ್ರಹವನ್ನೇ ಹೊಂದಿದೆ.

ಡಬಲ್ ಡೆಕ್ಕರ್ ಬಸ್ ಆಗಮನ

ಹೊಸ ವಾಹನಗಳ ಸೇರ್ಪಡೆ:
'ಮಂಜೂಷಾ' ವಾಹನ ಸಂಗ್ರಹಾಲಯಕ್ಕೆ ಮುಂಬೈನಲ್ಲಿರುವ ಧರ್ಮಸ್ಥಳದ ಭಕ್ತರು ಸಂಗ್ರಹಿಸಿ ಕಳುಹಿಸಿದ ಎರಡು ಡಬಲ್ ಡೆಕ್ಕರ್ ಬಸ್‍ಗಳು ಧರ್ಮಸ್ಥಳಕ್ಕೆ ತಲುಪಿವೆ. ಮುಂಬೈನಿಂದ ಧರ್ಮಸ್ಥಳಕ್ಕೆ ಡಬಲ್ ಡೆಕ್ಕರ್ ಬಸ್‌ಗಳನ್ನು ವಿಆರ್​ಎಲ್​ ಲಾಜಿಸ್ಟಿಕ್ ಸಂಸ್ಥೆಯವರು ಉಚಿತವಾಗಿ ಸಾಗಣೆ ಮಾಡಿ ಮಾಡಿಕೊಟ್ಟಿದ್ದು, ಧರ್ಮಾಧಿಕಾರಿ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಭಕ್ತರಿಗೆ ಮತ್ತು ಸಂಸ್ಥೆಯವರಿಗೆ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದವನ್ನು ಕೋರಿ ಶುಭ ಹಾರೈಸಿದ್ದಾರೆ. ಮುಂದೆ ಈ ಎರಡೂ ಬಸ್​ಗಳು ಕ್ಷೇತ್ರದ ವಿಶೇಷ ಆಕರ್ಷಣೆಯಾಗುವ ಸಾಧ್ಯತೆಗಳಿವೆ.‌

ABOUT THE AUTHOR

...view details