ಮಂಗಳೂರು :ಎರಡನೇ ಹಂತದ ಲಾಕ್ಡೌನ್ ನಡುವೆಯೂ ನಗರದಲ್ಲಿ ಪೊಲೀಸರ ಕಠಿಣ ಕಣ್ಗಾವಲಿನ ನಡುವೆಯೂ ಬೆಳಗಿನ ಹೊತ್ತು ವಾಹನಗಳ ಓಡಾಟ ಹೆಚ್ಚಾಗಿ ಕಂಡುಬರುತ್ತಿದೆ.
ವೈದ್ಯಕೀಯ ಸೇವೆ, ಅಗತ್ಯ ವಸ್ತುಗಳ ಸರಬರಾಜು, ಕೊರೊನಾ ವಾರಿಯರ್, ಪಾಸ್ ಹೊಂದಿರುವವರಿಗೆ ವಿನಾಯಿತಿ ನೀಡಲಾಗಿದ್ದರೂ, ಅನಗತ್ಯವಾಗಿ ಓಡಾಡುವ ವಾಹನಗಳ ಸಂಖ್ಯೆಯಲ್ಲಿಯೂ ಹೆಚ್ಚಾಗಿ ಕಂಡು ಬರುತ್ತಿದೆ. ಅನಗತ್ಯ ಓಡಾಟ ನಡೆಸುವವರ ಮೇಲೆ ಪೊಲೀಸರು ಕಾನೂನು ಕ್ರಮ ಜರುಗಿಸಿ ವಾಹನಗಳನ್ನು ಜಪ್ತಿ ಮಾಡುತ್ತಿದ್ದರೂ ಓಡಾಟಕ್ಕೆ ಕಡಿವಾಣ ಬಿದ್ದಂತಿಲ್ಲ.