ಮಂಗಳೂರು: ನಗರದ ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ಡಾಲ್ಫಿನ್ ಮೀನಿನ ಕಳೇಬರ ಪತ್ತೆಯಾಗಿದೆ. ಮಧ್ಯಾಹ್ನ ವೇಳೆಗೆ ಅಲೆಗಳೊಂದಿಗೆ ಮೀನಿನ ಮೃತದೇಹ ದಡಕ್ಕೆ ಸೇರಿದ್ದು ಬಳಿಕ ಮೀನಿನ ಕಳೆಬರವನ್ನು ಸಮುದ್ರದ ಕಿನಾರೆಯಲ್ಲೇ ಹೂತು ಹಾಕಲಾಯಿತು. ಫಾತಿಮಾ ಚರ್ಚ್ ಭಾಗದಲ್ಲಿ ಭಾರಿ ಗಾತ್ರದ ಮೀನು ದಡಕ್ಕೆ ಬಂದು ಬಿದ್ದಿತ್ತು. ಈ ವೇಳೆ ಅಲ್ಲಿದ್ದವರು ಕುತೂಹಲದಿಂದ ಮೀನು ಬಿದ್ದಲ್ಲಿಗೆ ಓಡಿದ್ದಾರೆ.
ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ಬೃಹತ್ ಗಾತ್ರದ ಡಾಲ್ಫಿನ್ ಕಳೇಬರ ಪತ್ತೆ - Etv Bharat Kannada
ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿಂದು ದೊಡ್ಡ ಗಾತ್ರದ ಡಾಲ್ಫಿನ್ ಮೃತ ದೇಹ ಪತ್ತೆಯಾಗಿದೆ.
ಫೆರಿ ಸಮೀಪದಲ್ಲಿ ಕೆಲಸ ಮಾಡುತ್ತಿದ್ದ ಬ್ಲೂ ಫ್ಲ್ಯಾಗ್ ಯೋಜನೆಯ ಕಾರ್ಮಿಕರು, ತಣ್ಣೀರು ಬಾವಿ ಬೀಚ್ ನಿರ್ವಹಣೆ ಮಾಡುತ್ತಿರುವ ಯೋಜಕ್ ಸಂಸ್ಥೆಯ ಸಿಬ್ಬಂದಿ ಮತ್ತು ಲೈಫ್ ಗಾರ್ಡ್ಗಳು ಮೀನಿನ ಕಳೆಬರವನ್ನು ಹಗ್ಗದಲ್ಲಿ ಕಟ್ಟಿ ಎಳೆದು ಮರಳಿನ ಮೇಲೆ ತಂದಿದ್ದಾರೆ. ಬಳಿಕ ಪಣಂಬೂರು ಪೊಲೀಸರಿಗೆ ಕರಾವಳಿ ಕಾವಲು ಪಡೆ ಹಾಗೂ ಅರಣ್ಯ ಇಲಾಖೆಗೂ ಮಾಹಿತಿ ನೀಡಲಾಯಿತು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೀಫ್ ವಾಚ್ ಮರೈನ್ ಕನ್ಸರ್ವೇಷನ್ ಸಂಸ್ಥೆಯ ಕರ್ನಾಟಕ ಸಂಯೋಜಕಿ ತೇಜಸ್ವಿನಿ ಮೀನಿನ ಮರಣೋತ್ತರ ಪರೀಕ್ಷೆ ಮಾಡಿದ್ದಾರೆ. ಪ್ರಕ್ರಿಯೆ ನಡೆದ ಬಳಿಕ ಐದು ಅಡಿ ಆಳದ ಹೊಂಡ ತೋಡಿ ಡಾಲ್ಪಿನ್ ಮೀನನ್ನು ಹೂಳಲಾಯಿತು.
ಇದನ್ನೂ ಓದಿ:ಕಾರವಾರದಲ್ಲಿ ಗೋಲ್ ಫಿಶ್ ಪತ್ತೆ: ಇದನ್ನು 'ಗೋಲ್ಡನ್ ಹೃದಯದ ಮೀನು' ಎನ್ನುವುದೇಕೆ?