ಪುತ್ತೂರು (ದಕ್ಷಿಣ ಕನ್ನಡ): ಕೊರೊನಾ 2ನೇ ಅಲೆ ಅಬ್ಬರ ಹೆಚ್ಚಾದ ಬೆನ್ನಲ್ಲೆ ರಾಜ್ಯ ಸರಕಾರ 14 ದಿನಗಳ ಕೊರೊನಾ ಕರ್ಫ್ಯೂ ಘೋಷಿಸಿದೆ. ಕೊರೊನಾದಿಂದ ಪಾರಾಗಲು ಪ್ರತಿಯೊಬ್ಬರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಈ ನಡುವೆ ನಾಯಿಯೊಂದರ ಮಾಲೀಕರು ತಮ್ಮ ಮುದ್ದಿನ ಶ್ವಾನಕ್ಕೂ ಕೊರೊನಾದಿಂದ ರಕ್ಷಣೆ ನೀಡಿದ್ದು, ನಾಯಿಗೂ ಮಾಸ್ಕ್ ಹಾಕಿಸಿ ಹೊರಗೆ ಕರೆತಂದಿದ್ದಾರೆ. ಇಲ್ಲಿನ ದರ್ಬೆ ಜಂಕ್ಷನ್ನಲ್ಲಿ ಪುತ್ತೂರು ನಗರ ಠಾಣೆಯ ಪೊಲೀಸರು ಅನಗತ್ಯ ವಾಹನಗಳ ತಡೆಯುವಾಗ ಬೈಕ್ನಲ್ಲಿ ನಾಯಿಯೊಂದು ಮಾಸ್ಕ್ ಧರಿಸಿ ನಿಂತಿರುವುದು ಕಂಡುಬಂದಿದೆ.