ಕರ್ನಾಟಕ

karnataka

ETV Bharat / state

ಬಾಂಬ್​ನಿಂದಾಗುತ್ತಿದ್ದ ದುರಂತ ತಪ್ಪಿಸಿ ಹೀರೋ ಆಯ್ತು ಈ ಜಾಕ್​! - ಸಿಐಎಸ್ಎಫ್ ಸಿಬ್ಬಂದಿಗಳ ಜೊತೆಗೆ ಜಾಕ್ ಕೆಲಸ

ಲ್ಯಾಬ್ರಾಡಾರ್​ ಜಾತಿಗೆ ಸೇರಿದ ಶ್ವಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಸಿಬ್ಬಂದಿ ಜೊತೆ ಕಾರ್ಯ ನಿರ್ವಹಿಸುತ್ತಿದೆ. ಈ ಶ್ವಾನಕ್ಕೆ ಜಾಕ್​ ಎಂದು ಹೆಸರಿಡಲಾಗಿದ್ದು, ನಿಲ್ದಾಣದಲ್ಲಿ ಸಂಭವಿಸಲಿದ್ದ ದುಷ್ಕೃತ್ಯವನ್ನು ತಪ್ಪಿಸಿದ ಕೀರ್ತಿ ಇದಕ್ಕೆ ಸಲ್ಲುತ್ತದೆ.

ಬಾಂಬ್​ ಇರೋದನ್ನು ಗುರುತಿಸಿದ ಜಾಕ್​ ನಾಯಿ , Dog detect the bomb at mangalore airport
ಬಾಂಬ್​ ಇರೋದನ್ನು ಗುರುತಿಸಿದ ಜಾಕ್​ ನಾಯಿ

By

Published : Jan 20, 2020, 11:34 PM IST

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಹಚ್ಚುವ ಮೂಲಕ ಬಹುದೊಡ್ಡ ಅನಾಹುತ ತಪ್ಪಿಸಿದ ಕೀರ್ತಿ ಜಾಕ್​ಗೆ ಸಲ್ಲುತ್ತದೆ.

ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಸಿಬ್ಬಂದಿ ಜೊತೆಗೆ ಜಾಕ್ ಎಂಬ ಶ್ವಾನ ಕಾರ್ಯನಿರ್ವಹಿಸುತ್ತಿದೆ. ಈ ಶ್ವಾನ ಲ್ಯಾಬ್ರಾಡಾರ್​ ಜಾತಿಗೆ ಸೇರಿದೆ. ಸಿಐಎಸ್ಎಫ್ ಸಿಬ್ಬಂದಿ ವಿಮಾನ ನಿಲ್ದಾಣದ ಹೊರಗೆ ತಪಾಸಣೆ ಮಾಡುತ್ತಿದ್ದ ವೇಳೆ ಜಾಕ್ ಮೊದಲಿಗೆ ಅನುಮಾನಾಸ್ಪದ ಬ್ಯಾಗ್ ಗುರುತಿಸಿತ್ತು. ಈ ಬ್ಯಾಗ್​ನಲ್ಲಿ ಸ್ಫೋಟಕದಂತಹ ಸಾಮಗ್ರಿ ಇರುವ ಬಗ್ಗೆ ಜಾಕ್ ಕಂಡು ಹಿಡಿದ ತಕ್ಷಣ, ಸಿಐಎಸ್ಎಫ್ ಸಿಬ್ಬಂದಿ ಅಲರ್ಟ್ ಆದ್ರು.

ಬಾಂಬ್​ ಇರೋದನ್ನು ಗುರುತಿಸಿ ಭಾರಿ ಅನಾಹುತ ತಪ್ಪಿಸಿತು ಜಾಕ್! ​

ಕೂಡಲೇ ಮಂಗಳೂರು ನಗರ ಪೊಲೀಸರಿಗೆ ಮತ್ತು ಬಾಂಬ್ ಸ್ಕ್ವಾಡ್ ಗೆ ಮಾಹಿತಿ ನೀಡಿ, ಅನುಮಾನಾಸ್ಪದ ಬ್ಯಾಗನ್ನು ಅಲ್ಲಿಂದ ಸ್ಥಳಾಂತರಿಸಿ ಬಾಂಬ್ ನಿಷ್ಕ್ರಿಯಗೊಳಿಸಲಾಗಿದೆ.

ABOUT THE AUTHOR

...view details