ಮಂಗಳೂರು : ನಾಯಿಗಳ ದಾಳಿಯಿಂದಾಗಿ 10 ಕಾಡುಕುರಿಗಳು ಬಲಿಯಾಗಿ, ಐದು ಕಾಡುಕುರಿಗಳು ಗಾಯಗೊಂಡ ಘಟನೆ ಪಿಲಿಕುಳ ನಿಸರ್ಗಧಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಪಿಲಿಕುಳ ನಿಸರ್ಗಧಾಮದಲ್ಲಿ ನಾಯಿ ದಾಳಿ .... 10 ಕಾಡುಕುರಿಗಳು ಬಲಿ ! - latest mangalore pilikola news
ಮಂಗಳೂರು ಪಿಲಿಕೊಳದ ನಿಸರ್ಗ ಧಾಮದಲ್ಲಿ ಕಾಡುಕುರಿಗಳ ಮೇಲೆ ನಾಯಿಗಳ ಹಿಂಡು ದಾಳಿ ನಡೆಸಿ 10 ಕುರಿಗಳನ್ನು ಕೊಂದು ಹಾಕಿ, 5 ಕುರಿಗಳುನ್ನು ಕಚ್ಚಿ ತೀವ್ರವಾಗಿ ಗಾಯಗೊಳಿವೆ.
ರಾತ್ರಿ ವೇಳೆ 5 ನಾಯಿಗಳ ಹಿಂಡು ದಾಳಿ ನಡೆಸಿವೆ. ತಡೆಗೋಡೆ ಕುಸಿದಿರುವ ಭಾಗದಿಂದ ಒಳ ನುಸುಳಿರುವ ನಾಯಿಗಳ ಹಿಂಡು ಕಾಡುಕುರಿಗಳ ಮೇಲೆ ತೀವ್ರ ದಾಳಿ ನಡೆಸಿವೆ. ಪರಿಣಾಮ 10 ಕಾಡುಕುರಿಗಳು ಮೃತಪಟ್ಟಿವೆ. ಅಲ್ಲದೆ ಐದು ಕಾಡುಕುರಿಗಳು ಗಾಯಗೊಂಡಿವೆ. ಪಶುವೈದ್ಯಾಧಿಕಾರಿಗಳು ಗಾಯಗೊಂಡ ಕಾಡುಕುರಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಪಿಲಿಕುಳ ನಿರ್ದೇಶಕ ಜಯಪ್ರಕಾಶ್ ಭಂಡಾರಿ, ಪಿಲಿಕುಳದಲ್ಲಿ ಹಿಂದೆ ಕೇವಲ ನಾಲ್ಕೈದು ಕಾಡು ಕುರಿಗಳಿದ್ದವು, ಈಗ ಅವುಗಳ ಸಂಖ್ಯೆ 40 ರಷ್ಟು ಆಗಿದೆ. ಅವುಗಳಲ್ಲಿ ಕೆಲವನ್ನು ನಾವು ಕಾಡಿಗೆ ಬಿಡಬೇಕೆಂದು ಚಿಂತನೆ ನಡೆಸುತ್ತಿದ್ದೆವು, ಅಷ್ಟರಲ್ಲಿ ಈ ದಾಳಿ ನಡೆದಿದೆ. ಆದಷ್ಟು ಶೀಘ್ರದಲ್ಲಿ ಹತ್ತು ಕುರಿಗಳನ್ನು ಕಾಡಿಗೆ ಬಿಡಲಿದ್ದೇವೆ ಎಂದರು.