ಕರ್ನಾಟಕ

karnataka

By

Published : Sep 2, 2021, 3:54 PM IST

ETV Bharat / state

ಸುಳ್ಯದಲ್ಲಿ ವ್ಯಕ್ತಿಗೆ ಒಂದೇ ಬಾರಿಗೆ COVID ಡಬಲ್ ಡೋಸ್ ಲಸಿಕೆ.. ಮುಂದೇನಾಯ್ತು?

ಕೋವಿಡ್​ ಲಸಿಕೆ ಪಡೆಯಲು ಬಂದ ಯುವಕನಿಗೆ ಕೆಲವೇ ಕ್ಷಣಗಳಲ್ಲಿ ಎರಡು ಡೋಸ್​ ಲಸಿಕೆ ನೀಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ದುಗಲಡ್ಕದಲ್ಲಿ ನಡೆದಿದೆ. ಸದ್ಯ ಯುವಕನ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ತಿಳಿದು ಬಂದಿದೆ.

doctor-gave-double-dose-covid-vaccine-to-a-boy
ಡಬಲ್ ಡೋಸ್ ಲಸಿಕೆ

ಸುಳ್ಯ: ತಾಲೂಕಿನ ದುಗಲಡ್ಕ ಪ್ರೌಢಶಾಲೆಯಲ್ಲಿ ನಡೆಯುತ್ತಿದ್ದ ಕೊರೊನಾ ಲಸಿಕೆ ಶಿಬಿರದಲ್ಲಿ ಯುವಕನೋರ್ವನಿಗೆ ಆರೋಗ್ಯ ಸಹಾಯಕಿಯೊಬ್ಬರು ಕೆಲವೇ ಕ್ಷಣಗಳ ಅಂತರದಲ್ಲಿ ಎರಡು ಡೋಸ್ ಲಸಿಕೆ ನೀಡಿದ ಘಟನೆ ನಡೆದಿದೆ.

ದುಗಲಡ್ಕದ ಕೂಟೇಲು ಸಿ.ಆರ್.ಸಿ.ಯ ಬಾಲಸುಬ್ರಹ್ಮಣ್ಯಂ ಎಂಬವರ ಪುತ್ರ ಕೆ.ಬಿ. ಅರುಣ್ ಪ್ರಥಮ ಹಂತದ ಡೋಸ್ ಪಡೆಯಲು ಬಂದಿದ್ದರು. ಈ ಸಂದರ್ಭ ಆರೋಗ್ಯ ಸಹಾಯಕಿ ಅರುಣ್‌ಗೆ ಲಸಿಕೆ ನೀಡಿದ್ದರು. ಲಸಿಕೆ ತೆಗೆದುಕೊಂಡಿದ್ದರೂ ಅರುಣ್ ಅಲ್ಲೇ ಕುಳಿತಿದ್ದ. ಈ ವೇಳೆ ಆರೋಗ್ಯ ಸಹಾಯಕಿ ತಿಳಿಯದೇ ಮತ್ತೊಮ್ಮೆ ಕೋವಿಡ್ ಲಸಿಕೆ ಚುಚ್ಚಿದ್ದಾರೆ ಎನ್ನಲಾಗ್ತಿದೆ. ಆತಂಕಗೊಂಡ ಮನೆಯವರು ಆರೋಗ್ಯ ಸಹಾಯಕಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಈಟಿವಿ ಭಾರತವು ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್‌ರನ್ನು ಸಂಪರ್ಕಿಸಿದ್ದು, ಬಹಳಷ್ಟು ಜನರು ಲಸಿಕೆ ಪಡೆಯಲು ಸರದಿಯಲ್ಲಿ ನಿಂತಿದ್ದರು. ಈ ಸಂದರ್ಭದಲ್ಲಿ ಅರುಣ್​ಗೆ ಮೊದಲ ಡೋಸ್​ ನೀಡಲಾಗಿತ್ತು. ಆದ್ರೂ ಎದ್ದು ಹೋಗದೆ ಅದೇ ಸ್ಥಳದಲ್ಲಿ ಕುಳಿತುಗೊಂಡಿದ್ದ. ಮಾಸ್ಕ್​ ಧರಿಸಿದ್ದರಿಂದ ಒಮ್ಮೇಲೆ ಗುರುತು ಪತ್ತೆ ಹಚ್ಚಲಾಗಲಿಲ್ಲ. ಅಲ್ಲದೆ ಎರಡನೇ ಬಾರಿ ಚುಚ್ಚು ಮದ್ದು ನೀಡಲು ಮುಂದಾದಾಗ ಮನೆಯವರು ಏನೂ ಹೇಳಲಿಲ್ಲ. ನಿನ್ನೆ ರಾತ್ರಿ ಮತ್ತು ಇಂದು ಯುವಕನ ಮನೆಯವರನ್ನು ಸಂಪರ್ಕಿಸಲಾಗಿದೆ. ಯಾವುದೇ ಆರೋಗ್ಯ ಸಮಸ್ಯೆ ಎದುರಾಗಿಲ್ಲ ಎಂದು ಮನೆಯವರು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಆತಂಕ ಪಡಬೇಕಾಗಿಲ್ಲ ಎಂದು ಅರುಣ್​ ಕಟುಂಬಸ್ಥರಿಗೆ ಧೈರ್ಯ ತುಂಬಲಾಗಿದೆ ಎಂದು ಹೇಳಿದರು.

ABOUT THE AUTHOR

...view details