ಮಂಗಳೂರು: ಸಿಎಂ ಬದಲಾವಣೆ ವಿಚಾರದಲ್ಲಿ ಜುಲೈ 26ಕ್ಕೆ ಮಾತಾಡುವ ಎಂದು ಹೇಳಿದ್ದೆ. ಇವರಿಗೆ ಒಳ್ಳೆಯ ಸರ್ಕಾರ ಕೊಡಲು ಆಗಿಲ್ಲ ಎಂದು ಸಿಎಂ ಬದಲಾಯಿಸುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಇದ್ದು ಒಳ್ಳೆಯ ಆಡಳಿತ ಕೊಡಲು ಆಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಡಬಲ್ ಇಂಜಿನ್ ಸರ್ಕಾರ ಇದ್ದು, ಒಳ್ಳೆಯ ಆಡಳಿತ ಕೊಡಲು ಆಗಿಲ್ಲ, ಈಗ ಕಿತ್ತಾಡುತ್ತಾ ಇದ್ದಾರೆ. ಅದು ಅವರ ಪಾರ್ಟಿ ವಿಚಾರ. ಆದರೆ ಆಡಳಿತ ವ್ಯವಸ್ಥೆ ಕಥೆಯೇನು? ಯಾವ ಅಧಿಕಾರಿಗಳು ಮಾತು ಕೇಳ್ತಾರೆ. ತರಾತುರಿಯಲ್ಲಿ ಎಲ್ಲ ಫೈಲ್ಗಳಿಗೂ ಸಹಿ ಹಾಕಲಾಗುತ್ತಿದೆ. ಬಜೆಟ್ನಲ್ಲಿ ಇಟ್ಟ ಹಣಕ್ಕಿಂತ ಜಾಸ್ತಿ ಫೈಲ್ಗಳಿಗೆ ಸಹಿ ಹಾಕಲಾಗುತ್ತಿದೆ. ಈ ಬಗ್ಗೆ ದಾಖಲೆ ಪಡೆದು ವಿಧಾನಸಭೆಯಲ್ಲಿ ಮಾತನಾಡುತ್ತೇವೆ ಎಂದಿದ್ದಾರೆ.
ಒಳ್ಳೆ ಸರ್ಕಾರ ಕೊಡಲಾಗಿಲ್ಲ ಅಂತಾ ಸಿಎಂ ಬದಲಾವಣೆ: ಡಿಕೆ ಶಿವಕುಮಾರ್ ಸಿಎಂ ಯಡಿಯೂರಪ್ಪ ಪರ ಮಠಾಧೀಶರು ಬೆಂಬಲ ಸೂಚಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಸಂದರ್ಭದಲ್ಲಿ ನಾವುಗಳು ಅವರಲ್ಲಿ ಹೋಗಿ ಸಹಾಯ ಕೇಳಿದ ಹಿನ್ನೆಲೆ ಅವರು ಮಾತಾಡುತ್ತಿದ್ದಾರೆ. ನಾವೇ ಹೋಗಿಲ್ಲ ಅಂದರೆ ಅವರು ಹೇಗೆ ಬರ್ತಿದ್ದರು. ಅವರ ಅಭಿಪ್ರಾಯ ಹೇಳ್ತಾ ಇದ್ದಾರೆ. ಅದನ್ನು ತಪ್ಪು ಎನ್ನುವುದಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಆಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಯಾರಾದರೂ ಸೇರುವುದಿದ್ದರೆ ಮೊದಲು ಅರ್ಜಿ ಹಾಕಲಿ. ಈ ವಿಚಾರದಲ್ಲಿ ಕೂತು ಮಾತಾಡುತ್ತೇವೆ. ವಲಸೆ ಹೋದ ಶಾಸಕರು ಪಕ್ಷಕ್ಕೆ ಬರುವ ಬಗ್ಗೆ ನಿಮ್ಮಲ್ಲಿ ಮಾತಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಅವರು ಪಕ್ಷಕ್ಕೆ ಬರುವುದಿದ್ದರೆ ಅರ್ಜಿ ಹಾಕಬೇಕು ಎಂದರು. ಸುಮ್ಮ ಸುಮ್ಮನೆ ಆ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಬರಲು ತುಂಬಾ ಜನ ಮುಂದಾಗಿದ್ದಾರೆ. ಬಹಳ ಜನ ಬರುವವರು ಇದ್ದಾರೆ. ಅರ್ಜಿ ಹಾಕಿದರೆ ಈ ಬಗ್ಗೆ ಪಕ್ಷದ ವಲಯದಲ್ಲಿ ಚರ್ಚಿಸುತ್ತೇವೆ ಎಂದರು.
ಓದಿ:ಫೋನ್ ಕದ್ದಾಲಿಕೆ ಪ್ರಕರಣ ಸುಪ್ರೀಂ ಜಡ್ಜ್ಗಳಿಂದ ತನಿಖೆಯಾಗಲಿ: ಸಿದ್ದರಾಮಯ್ಯ ಒತ್ತಾಯ