ಬಂಟ್ವಾಳ: ಬಂಟ್ವಾಳ ಕ್ಷೇತ್ರ ಬಿಜೆಪಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ನೇತೃತ್ವದಲ್ಲಿ ಗಡಿ ಕಾಯುವ ಯೋಧನ ಮನೆಯಲ್ಲಿ ದೀಪಾವಳಿ ಹಬ್ಬ ಆಚರಿಸಲಾಯಿತು.
ಬಂಟ್ವಾಳ: ಯೋಧನ ಮನೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ದೀಪಾವಳಿ ಆಚರಣೆ - Bantwal MLA
ಗಡಿ ಕಾಯುವ ಯೋಧನ ಮನೆಯಲ್ಲಿ ದೀಪಾವಳಿ ಹಬ್ಬ ಆಚರಿಸಿ, ಯೋಧನಿಗೆ ಕರೆ ಮಾಡಿ ಶುಭಾಶಯ ಹೇಳುವ ಮೂಲಕ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗಮನ ಸೆಳೆದಿದ್ದಾರೆ.
ಯೋಧನ ಮನೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ದೀಪಾವಳಿ ಆಚರಣೆ
ನರಿಕೊಂಬು ಗ್ರಾಮದ ನಾಟಿ ಸಜಂಕಪಲಿಕೆಯ ಯೋಧ ನಾಗೇಶ್ ಮನೆಯಲ್ಲಿ ಬಿಜೆಪಿಯಿಂದ ದೀಪಾವಳಿ ಆಚರಿಸಲಾಯಿತು. ಈ ವೇಳೆ, ಶಾಸಕ ರಾಜೇಶ್ ನಾಯ್ಕ್ ದೀಪ ಬೆಳಗಿಸಿ ಶುಭ ಹಾರೈಸಿ ಕರ್ತವ್ಯದಲ್ಲಿದ್ದ ಯೋಧ ನಾಗೇಶ್ಗೆ ವಿಡಿಯೋ ಕರೆ ಮೂಲಕ ದೀಪಾವಳಿಯ ಶುಭಾಶಯ ತಿಳಿಸಿದರು.
ಈ ವೇಳೆ ಮಾತನಾಡಿ, ದೇಶ ಸೇವೆ ಮಾಡುವ ಯೋಧರೊಂದಿಗೆ ದೀಪಾವಳಿ ಆಚರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನಮ್ಮೆಲ್ಲರಿಗೆ ನೀಡಿದ ಪ್ರೇರಣೆಯ ಈ ಕಾರ್ಯಕ್ರಮ ಸಂತೋಷ ತಂದಿದೆ ಎಂದರು.