ಬೆಳ್ತಂಗಡಿ: ಕುತೂಹಲ ಕಪ್ ಸೀಸನ್ 6 ಜಿಲ್ಲಾಮಟ್ಟದ ಸಿಂಗಲ್ ಗ್ರಿಪ್ ಮತ್ತು ವಲಯ ಮಟ್ಟದ ಪಂದ್ಯಾವಳಿ ಉಜಿರೆ ಜನಾರ್ಧನ ದೇವಸ್ಥಾನದ ಸಮೀಪ ರಂಜನ್ ದೇವಾಡಿಗ ಎಂಬುವರ ಗದ್ದೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ವಿಶೇಷ ಸಾಧನೆಗಾಗಿ ಲೂವಿಸ್ ರೋಡ್ರಿಗಸ್ ಅವರಿಗೆ ಕೂತೂಹಲ ಗೌರವ ಸಮ್ಮಾನ್ ಬಿರುದು ನೀಡಿ ಗೌರವಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಬೆಳ್ತಂಗಡಿ ತಾ.ಪಂ, ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ್ ಕಲ್ಮಂಜ, ಕಣಿಯೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುನೀಲ್, ವಕೀಲರಾದ ವಸಂತ ಮರಕಡ ಭಾಗವಹಿಸಿ ಪ್ರಶಸ್ತಿ ವಿತರಿಸಿ ಪ್ರೇರಣಾತ್ಮಕ ಮಾರ್ಗದರ್ಶನ ನೀಡಿದರು.