ಪುತ್ತೂರು (ದಕ್ಷಿಣಕನ್ನಡ):ತಾಲೂಕಿನ ಗೋಳಿಕಟ್ಟೆಯಲ್ಲಿ ಆವರಣ ಗೋಡೆ ಕುಸಿದು ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಶಾಸಕ ಸಂಜೀವ ಮಠಂದೂರು, 5 ಲಕ್ಷ ರೂ. ಪರಿಹಾರ ಧನವನ್ನ ಹಸ್ತಾಂತರಿಸಿದರು.
ಪುತ್ತೂರು: ಆವರಣ ಗೋಡೆ ಕುಸಿದು ಮೃತಪಟ್ಟ ಮಹಿಳೆ ಕುಟುಂಬಕ್ಕೆ ಪರಿಹಾರ ಧನ ವಿತರಣೆ - MLA sanjeeva mathandoor
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಗೋಳಿಕಟ್ಟೆಯಲ್ಲಿ ಆವರಣ ಗೋಡೆ ಕುಸಿದು ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಶಾಸಕ ಸಂಜೀವ ಮಠಂದೂರು, 5 ಲಕ್ಷ ರೂ. ಪರಿಹಾರ ಧನವನ್ನ ಹಸ್ತಾಂತರಿಸಿದ್ದಾರೆ.

ಜುಲೈ 7ರಂದು ಪುತ್ತೂರು ನಗರಸಭಾ ವ್ಯಾಪ್ತಿಯ ಪರ್ಲಡ್ಕ ಗೋಳಿಕಟ್ಟೆ ಬೊಳ್ಳಾಣ ಎಂಬಲ್ಲಿ ಪಕ್ಕದ ಮನೆಯ ಆವರಣ ಗೋಡೆ ಕುಸಿದು ವಸಂತಿ ಯಾನೆ ಶೋಭಾ ಎಂಬ ಮಹಿಳೆ ಮೃತಪಟ್ಟಿದ್ದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್, ಮೃತ ಮಹಿಳೆಯ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 5 ಲಕ್ಷ ರೂ. ಪರಿಹಾರವನ್ನು ತ್ವರಿತವಾಗಿ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಘಟನೆ ನಡೆದ ಮೂರು ದಿನಗಳೊಳಗೆ ಸಂತ್ರಸ್ತ ಮಹಿಳೆಯ ಕುಟುಂಬಕ್ಕೆ 5 ಲಕ್ಷ ರೂ. ಸಿಕ್ಕಿದೆ.
ಈ ವೇಳೆ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಪ್ರಾಕೃತಿಕ ವಿಕೋಪದಲ್ಲಿ ಜೀವ ಹಾನಿಯಾದವರ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ಧನ ನೀಡಲಾಗುತ್ತಿದೆ. ಅದರಂತೆ ಗೋಳಿಕಟ್ಟೆಯಲ್ಲಿ ಆವರಣ ಗೋಡೆ ಕುಸಿದು ಮೃತಪಟ್ಟ ಮಹಿಳೆಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಹಸ್ತಾಂತರಿಸಲಾಗಿದೆ ಎಂದರು.