ಪುತ್ತೂರು (ದಕ್ಷಿಣ ಕನ್ನಡ):ಲಾಕ್‌ಡೌನ್ ಸಂದರ್ಭದಲ್ಲಿ ಜನರ ಆರೋಗ್ಯದ ಹಿತದೃಷ್ಟಿಯಿಂದ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಪೊಲೀಸ್ ಇಲಾಖೆಗೆ ಸಹಕಾರ ನೀಡುತ್ತಿರುವ ಗೃಹರಕ್ಷದಳದವರಿಗೂ ಅಗತ್ಯ ವಸ್ತುಗಳ ಪೂರೈಕೆ ಮಾಡಬೇಕಿದೆ. ಈ ಉದ್ದೇಶದಿಂದ ಶಾಸಕರ ವಾರ್ ರೂಮ್ ಮೂಲಕ ಆಹಾರದ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಅವರು ಹೇಳಿದರು.
ಜೀವ ಲೆಕ್ಕಿಸದೇ ಕಾರ್ಯನಿರ್ವಹಿಸುತ್ತಿರುವ ಗೃಹ ರಕ್ಷಕದಳಕ್ಕೂ ಪುತ್ತೂರಿನಲ್ಲಿ ಕಿಟ್ ವಿತರಣೆ
ಪೊಲೀಸ್ ಇಲಾಖೆಗೆ ಸಹಕಾರ ಮಾಡುವ ಗೃಹ ರಕ್ಷದಳದವರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಮನೆಯ ಸದಸ್ಯರನ್ನೂ ವಿಚಾರಿಸುವ ಅವಕಾಶ ಸಿಗದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗೃಹರಕ್ಷದಳದವರಿಗೆ ಯಾವುದೇ ತೊಂದರೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಶಾಸಕರ ವಾರ್ ರೂಮ್ ಮೂಲಕ ಕಿಟ್ ವಿತರಿಸಲಾಯಿತು.
ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅವರು ಗೃಹರಕ್ಷಕದಳದವರಿಗೆ ಆಹಾರದ ಕಿಟ್ ವಿತರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರ ಖಾಯಿಲೆ ನಿವಾರಣೆ ಮತ್ತು ಜನರ ರಕ್ಷಣೆ ಮಾಡಲು ಲಾಕ್‌ಡೌನ್ ಘೋಷಣೆ ಮಾಡಿತ್ತು. ಜನರ ಜೀವ ಮತ್ತು ಆರೋಗ್ಯ ಕಾಪಾಡುವುದು ಸರ್ಕಾರದ ಉದ್ದೇಶ. ಜನರ ಆರೋಗ್ಯ ದೃಷ್ಟಿಯಿಂದ ಜನಸಮೂಹ ತಡೆಯುವ ಕೆಲಸ ಇಲಾಖೆ ಮಾಡಬೇಕಾದರೆ, ಪೊಲೀಸರಿಗೆ ಸಹಕಾರ ಮಾಡುವ ಗೃಹ ರಕ್ಷದಳದವರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಮನೆಯ ಸದಸ್ಯರನ್ನೂ ವಿಚಾರಿಸುವ ಅವಕಾಶ ಸಿಗದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮನೆಗೆ ಒಂದಷ್ಟು ಆಹಾರ ಸಾಮಾಗ್ರಿ ಕೊಂಡೊಯ್ಯಲೆಂದು ಅಂಗಡಿಗೆ ಹೋಗುವ ಸಂದರ್ಭದಲ್ಲಿ ಅಂಗಡಿಯೂ ಬಂದ್ ಆಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಗೃಹರಕ್ಷದಳದವರಿಗೆ ಯಾವುದೇ ತೊಂದರೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಶಾಸಕರ ವಾರ್ ರೂಮ್ ಮೂಲಕ ಕಿಟ್ ವಿತರಿಸಲಾಗುತ್ತಿದೆ ಎಂದರು. ಸುಮಾರು 12 ಮಂದಿ ಗೃಹರಕ್ಷಕದಳದ ಸಿಬ್ಬಂದಿಗೆ ಆಹಾರದ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್, ಎಸ್ ಐ ಜಂಬೂರಾಜ್ ಮಹಾಜನ್, ಶಾಸಕರ ವಾರ್‌ರೂಮ್‌ನ ಸಂಯೋಜಕ ಸಾಜ ರಾಧಾಕೃಷ್ಣ ಆಳ್ವ, ಪಿ.ಜಿ.ಜಗನ್ನಿವಾಸ ರಾವ್, ಸದಸ್ಯರಾದ ರಾಮ್‌ದಾಸ್ ಹಾರಾಡಿ, ನಗರಸಭಾ ಸದಸ್ಯ ವಿನೋದ್, ರಾಮಚಂದ್ರ ಘಾಟೆ, ಅಶೋಕ್ ಬಲ್ನಾಡು, ಗೃಹರಕ್ಷಕ ದಳದ ಟೀಮ್‌ಲೀಡರ್ ಅಭಿಮನ್ಯು ಮತ್ತಿತರರು ಉಪಸ್ಥಿತರಿದ್ದರು.