ಸುಬ್ರಹ್ಮಣ್ಯ (ದಕ್ಷಿಣ ಕನ್ನಡ):ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಸುಳ್ಯ ಶಾಸಕರ ನೇತೃತ್ವದಲ್ಲಿ 2,500 ಆಹಾರ ಸಾಮಾಗ್ರಿಗಳ ಕಿಟ್ ತಯಾರಿ ಮಾಡಲಾಗಿದೆ.
ಪಡಿತರ ಕಾರ್ಡ್ ಇಲ್ಲದವರಿಗೂ ಆಹಾರ ಸಾಮಾಗ್ರಿ ಕಿಟ್ ವಿತರಣೆ - sulya news
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಪಡಿತರ ಕಾರ್ಡ್ ಇಲ್ಲದವರಿಗೂ ಪಡಿತರ ನೀಡಬೇಕೆನ್ನುವ ಬೇಡಿಕೆ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ದೇವಸ್ಥಾನದಿಂದ ಈ ಕಾರ್ಯ ಮಾಡಲಾಗುತ್ತಿದೆ.
![ಪಡಿತರ ಕಾರ್ಡ್ ಇಲ್ಲದವರಿಗೂ ಆಹಾರ ಸಾಮಾಗ್ರಿ ಕಿಟ್ ವಿತರಣೆ Distribution of food kit for those who do not have ration card](https://etvbharatimages.akamaized.net/etvbharat/prod-images/768-512-6982357-561-6982357-1588132435019.jpg)
ವಿಧಾನಸಭಾ ಕ್ಷೇತ್ರದಲ್ಲಿ ಪಡಿತರ ಕಾರ್ಡ್ ಇಲ್ಲದವರಿಗೆ ಪಡಿತರ ನೀಡಬೇಕೆನ್ನುವ ಬೇಡಿಕೆಯ ಕಾರಣ ದೇವಸ್ಥಾನದ ವತಿಯಿಂದ ಈ ಕೆಲಸ ನಡೆಯುತ್ತಿದೆ. ಕ್ಷೇತ್ರದ ಶಾಸಕ ಎಸ್.ಅಂಗಾರ ಅವರ ನೇತೃತ್ವದಲ್ಲಿ ಸುಬ್ರಹ್ಮಣ್ಯದಲ್ಲಿ ಫುಡ್ ಕಿಟ್ ರೆಡಿ ಮಾಡಲಾಗಿದೆ. ಸುಳ್ಯ ಹಾಗೂ ಕಡಬ ತಾಲೂಕಿನಲ್ಲಿ ಪಡಿತರ ಕಾರ್ಡ್ ಇಲ್ಲದ ಕುಟುಂಬಗಳಿಗೆ ಮೊದಲ ಆದ್ಯತೆಯಲ್ಲಿ ಕಿಟ್ ವಿತರಿಸಲಾಗುತ್ತಿದ್ದು, ವಲಸೆ ಕಾರ್ಮಿಕರಿಗೂ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿದು ಬಂದಿದೆ.
ಪಡಿತರ ಕಾರ್ಡ್ ಹೊಂದಿಲ್ಲದಿರುವ ಕುಟುಂಬಗಳ ಪಟ್ಟಿಯನ್ನು ಈಗಾಗಲೇ ಉಭಯ ತಾಲೂಕುಗಳ ಕಚೇರಿಯಿಂದ ಶಾಸಕರಿಗೆ ನೀಡಲಾಗಿದೆ. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಫುಡ್ ಕಿಟ್‌ಗಳನ್ನು ಶಾಸಕರಿಗೆ ಹಸ್ತಾಂತರಿಸಲಿದ್ದಾರೆ.