ಮಂಗಳೂರು: ನಗರದ ಕಿನ್ಯಾ ಗ್ರಾಮದ ಬೆಳರಿಂಗೆ ಎಂಬಲ್ಲಿ ಮಾಸ್ಕ್ ಧರಿಸದೇ, ಪಿಡಿಒ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಹಿನ್ನೆಲೆ ವ್ಯಕ್ತಿಯ ಮೇಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಸ್ಕ್ ಧರಿಸದೇ ಕರ್ತವ್ಯಕ್ಕೆ ಅಡ್ಡಿ: ಶಾಕಿರ್ ಎಂಬಾತನ ಮೇಲೆ ಪ್ರಕರಣ ದಾಖಲು - Ullala Police Station
ಮಾಸ್ಕ್ ಧರಿಸದೇ ಪಿಡಿಒ ಕರ್ತವ್ಯಕ್ಕೆ ಅಡ್ಡಿಪಡಿಸಿದ ಶಾಕಿರ್ ಎಂಬಾತನ ಮೇಲೆ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಕಾನೂನನ್ನು ಉಲ್ಲಂಘಿಸಲಾಗಿದೆ ಎಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ಮೇಲೆ ಪ್ರಕರಣ ದಾಖಲು
ಶಾಕಿರ್ ಎಂಬಾತ ಮಾಸ್ಕ್ ಧರಿಸದೇ ಕರ್ತವ್ಯಕ್ಕೆ ಅಡ್ಡಿಪಡಿಸಿದಾತ. ಪಿಡಿಒ ಪರಿಶೀಲನೆಗೆ ಬಂದಾಗ ಮಾಸ್ಕ್ ಧರಿಸದೇ ಕೆಲವರು ಕುಳಿತಿದ್ದರು. ಈ ಹಿನ್ನೆಲೆ ಪಿಡಿಒ ಎಲ್ಲರಿಗೂ ಮಾಸ್ಕ್ ಧರಿಸುವಂತೆ ಎಚ್ಚರಿಸಿದ್ದಾರೆ.
ಆದರೆ ಶಾಕಿರ್ 'ನಾನು ಮಾಸ್ಕ್ ಧರಿಸುವುದಿಲ್ಲ. ಇದು ನನ್ನ ಮನೆಯ ಅಂಗಳ, ಇಲ್ಲಿ ನಾನು ಹೇಗೆ ಬೇಕಾದರೂ ಇರುತ್ತೇನೆ. ನೀವು ಯಾರು ಕೇಳಲಿಕ್ಕೆ ಎಂದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಈ ಹಿನ್ನೆಲೆ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಕಾನೂನನ್ನು ಉಲ್ಲಂಘಿಸಲಾಗಿದೆ ಎಂದು ಪ್ರಕರಣ ದಾಖಲಾಗಿದೆ.