ಮಂಗಳೂರು:ಆಶಾ ಕಾರ್ಯಕರ್ತೆಯ ಕೆಲಸಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಮಂಗಳುರಿನ ಮಲ್ಲೂರಿನಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿದ್ದ ವಸಂತಿ ಎಂಬ ಆಶಾ ಕಾರ್ಯಕರ್ತೆಯ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ. ಈ ಹಿನ್ನೆಲೆ ಇಲ್ಲನ ಬದ್ರಿಯಾ ನಗರದ ಇಸ್ಮಾಯಿಲ್(45), ಅಶ್ರಫ್ (32) ಎಂಬುವರನ್ನು ಮಂಗಳೂರು ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ಆಶಾ ಕಾರ್ಯಕರ್ತೆಯ ಕರ್ತವ್ಯಕ್ಕೆ ಅಡ್ಡಿ: ಮಂಗಳೂರಲ್ಲಿ ಇಬ್ಬರ ಬಂಧನ - two arrested in mangalore
ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿದ್ದ ವಸಂತಿ ಎಂಬ ಆಶಾ ಕಾರ್ಯಕರ್ತೆಯ ಕೆಲಸಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆ ಇಲ್ಲನ ಬದ್ರಿಯಾ ನಗರದ ಇಸ್ಮಾಯಿಲ್(45), ಅಶ್ರಫ್ (32) ಎಂಬುವರನ್ನು ಮಂಗಳೂರು ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ಆಶಾ ಕಾರ್ಯಕರ್ತೆಯ ಕರ್ತವ್ಯಕ್ಕೆ ಅಡ್ಡಿ: ಮಂಗಳೂರಲ್ಲಿ ಇಬ್ಬರ ಬಂಧನ
ಆಶಾ ಕಾರ್ಯಕರ್ತೆ ವಸಂತಿ ಆರೋಗ್ಯ ಇಲಾಖೆಗೆ ಸಂಬಂಧಿಸಿದ ತನ್ನ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುತ್ತಿರುವಾಗ ಅಲ್ಲಿಗೆ ಬಂದ ಆರೋಪಿಗಳು ಸಾರ್ವಜನಿಕ ಹಿತದೃಷ್ಟಿಯಿಂದ ಕರ್ತವ್ಯ ನಿರ್ವಹಿಸುವುದನ್ನು ತಡೆದಿದ್ದಾರೆ. ಅಲ್ಲದೆ ಕರ್ತವ್ಯಕ್ಕೆ ಅಡ್ಡಿಗೊಳಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಬಳಿಕ ದೂರು ನೀಡಿದ ಅನ್ವಯ ಆರೋಪಿಗಳನ್ನು ಬಂಧಿಸಲಾಗಿದೆ.
Last Updated : Apr 11, 2020, 10:04 PM IST