ಮಂಗಳೂರು:ಕರಾವಳಿಯ ದೈವಾರಾಧನೆಯನ್ನು ಅವಮಾನ ಮಾಡಿದ ಟ್ರೋಲ್ ಪೇಜ್ ಪೋಸ್ಟ್ ವಿರುದ್ಧ ತುಳುವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಈ ಪೋಸ್ಟ್ ಕುರಿತಾಗಿ ತಮ್ಮ ಟ್ವಿಟ್ಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರೀತಿಯಾಗಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ವ್ಯಕ್ತಿಗಳು ಮತ್ತು ಫೇಸ್ಬುಕ್ ಪೇಜ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಗಳೂರು ಪೊಲೀಸ್ ಆಯಕ್ತ ಡಾ.ಪಿ.ಎಸ್.ಹರ್ಷ ಅವರಿಗೆ ಮನವಿಯನ್ನೂ ಸಹ ಮಾಡಿಕೊಂಡಿದ್ದಾರೆ.
ತುಳುವರ ಕೆಂಗಣ್ಣಿಗೆ ಗುರಿಯಾದ ಟ್ರೋಲ್ಪೇಜ್ ‘ಟ್ರೋಲ್ ಹೂ ಟ್ರೋಲ್ ಕನ್ನಡಿಗ’ ಎಂಬ ಫೇಸ್ಬುಕ್ ಪೇಜ್ನಲ್ಲಿ ದೈವಾರಾಧನೆ ನಿಂದನೆ ಮಾಡುವ ಪೋಸ್ಟ್ ಹಾಕಲಾಗಿದೆ. ಈ ಹಿಂದೆಯೂ ದೈವ ದೇವರನ್ನು ಅವಮಾನಿಸುವ ರೀತಿಯ ಪೋಸ್ಟ್ಗಳನ್ನು ಈ ಪೇಜ್ನಲ್ಲಿ ಹಾಕಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ದೈವಾರಾಧನಾ ಚಾವಡಿ ಮತ್ತು ದಲಿತ ರಕ್ಷಣಾ ವೇದಿಕೆಯವರು ಮಂಗಳೂರು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರೊಂದನ್ನೂ ಸಹ ಸಲ್ಲಿಸಿದ್ದರು. ಆದರೂ ಈ ಟ್ರೋಲ್ ಪೇಜ್ನವರು ಇದೀಗ ಮತ್ತೊಮ್ಮೆ ತುಳುವರ ಭಾವನೆಗಳಿಗೆ ಧಕ್ಕೆ ತರುವಂತೆ ದೈವಗಳನ್ನು ತುಂಬಾ ಕೀಳುಮಟ್ಟದಲ್ಲಿ ಅವಮಾನಿಸುತ್ತಿದ್ದಾರೆ. ಇದು ಆಕ್ರೋಶಕ್ಕೆ ಕಾರಣವಾಗಿದೆ.
ತುಳುವರ ಕೆಂಗಣ್ಣಿಗೆ ಗುರಿಯಾದ ಟ್ರೋಲ್ಪೇಜ್ ಶಾಸಕ ವೇದವ್ಯಾಸ ಕಾಮತ್ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಸಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಹರ್ಷ ಅವರು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ಕ್ರೈಮ್ ವಿಭಾಗದ ಡಿಸಿಪಿ ಅವರಿಗೆ ಈ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ವಹಿಸಿರುವುದಾಗಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಭರವಸೆ ನೀಡಿದ್ದಾರೆ.