ಕಡಬ :ದಕ್ಷಿಣ ಕನ್ನಡ ಜಿಲ್ಲೆಯಕಡಬ - ಕೋಡಿಂಬಾಳ ಮುಖ್ಯ ರಸ್ತೆಯಲ್ಲಿ ಬರುವ ಕಲ್ಲಂತಡ್ಕ ಬಸ್ ತಂಗುದಾಣ ಸರಿಯಾದ ನಿರ್ವಹಣೆ ಇಲ್ಲದೇ ದುಃಸ್ಥಿತಿಗೆ ತಲುಪಿದೆ.
ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ನೀಡುತ್ತಿದೆ ಈ ಬಸ್ ನಿಲ್ದಾಣ - daksin kannad bus stand news
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸಾರ್ವಜನಿಕ ಬಸ್ ನಿಲ್ದಾಣ ಸರಿಯಾದ ನಿರ್ವಹಣೆ ಇಲ್ಲದೇ ದುರ್ವಾಸನೆ ಬರುವುದರ ಜೊತೆಗೆ ರೋಗಗಳಿಗೆ ಎಡೆ ಮಾಡಿ ಕೊಡುತ್ತಿದೆ.
ಕಲ್ಲಂತಡ್ಕ ಬಸ್ ತಂಗುದಾಣ
ಲಕ್ಷಗಟ್ಟಲೆ ಅನುದಾನವನ್ನು ಬಳಸಿ ಸಾರ್ವಜನಿಕರ ಉಪಯೋಗಕ್ಕಾಗಿ ಕಟ್ಟಿದ ಈ ಬಸ್ ತಂಗುದಾಣ ಸ್ವಚ್ಚತೆ ಇಲ್ಲದೇ, ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೇ ಇರುವುದರಿಂದ ನಿಲ್ದಾಣದ ತುಂಬಾ ಕಲುಷಿತ ನೀರು ತುಂಬಿ ಗಬ್ಬು ವಾಸನೆ ಬರುತ್ತಿದೆ. ಮಾತ್ರವಲ್ಲ ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ನೀಡುವಂತಿದೆ.
ಸಂಬಂಧಪಟ್ಟ ಅಧಿಕಾರಿಳು ಕೂಡಲೇ ಕ್ರಮ ಕೈಗೊಂಡು, ನಿಲ್ದಾಣದ ದುರಸ್ತಿಗೆ ಮುಂದಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.