ಕರ್ನಾಟಕ

karnataka

ETV Bharat / state

ಉಪ್ಪಿನಂಗಡಿಯಲ್ಲಿ ಮಗುಚಿ ಬಿದ್ದ ಟ್ಯಾಂಕರ್​​​: ಡೀಸೆಲ್ ತುಂಬಿಕೊಳ್ಳಲು ಮುಗಿಬಿದ್ದ ಜನ! - tanker overturned at uppinangady

ಟ್ಯಾಂಕರ್ ಮಗುಚಿ ಬಿದ್ದ ಸಮಯದಲ್ಲಿ ಪೊಲೀಸರು ಸ್ಥಳಕ್ಕೆ ಬರಲು ವಿಳಂಬವಾದ ಕಾರಣ ಸ್ಥಳೀಯರು ಹಾಗೂ ಇತರೆ ವಾಹನ ಚಾಲಕರು ಬಾಟಲ್, ಕ್ಯಾನ್, ಬಕೆಟ್​ಗಳಲ್ಲಿ ಡೀಸೆಲ್ ತುಂಬಿಸಲು ಮುಂದಾಗಿದ್ದರು.

Diesel fuel tanker overturned at uppinangady
ಉಪ್ಪಿನಂಗಡಿಯಲ್ಲಿ ಮಗುಚಿ ಬಿದ್ದ ಟ್ಯಾಂಕರ್​​​: ಡೀಸೆಲ್ ತುಂಬಿಸಲು ಮುಂದಾದ ಜನತೆ

By

Published : Mar 13, 2021, 7:44 PM IST

ಉಪ್ಪಿನಂಗಡಿ: ಡೀಸೆಲ್ ತುಂಬಿದ್ದ ಟ್ಯಾಂಕರ್​​​ನ ಚಕ್ರ ಕಳಚಿದ ಪರಿಣಾಮ ಟ್ಯಾಂಕರ್​​ ಮಗುಚಿ ಬಿದ್ದು ಡೀಸೆಲ್ ಸೋರಿಕೆಯಾದ ಘಟನೆ ಇಂದು ಉಪ್ಪಿನಂಗಡಿ ಸಮೀಪದ ಬೊಳ್ಳಾರು ಎಂಬಲ್ಲಿ ನಡೆದಿದೆ.

ಡೀಸೆಲ್ ಟ್ಯಾಂಕರ್ ಚಾಲಕ ಮಹೇಶ್​​ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಟ್ಯಾಂಕರ್ ಮಂಗಳೂರಿನಿಂದ ಕೋಲಾರ ಕಡೆಗೆ ಹೋಗುತ್ತಿತ್ತು ಎಂದು ತಿಳಿದು ಬಂದಿದ್ದು, ಟ್ಯಾಂಕರ್ ರಸ್ತೆಗೆ ಅಡ್ಡಲಾಗಿ ಮಗುಚಿ ಬಿದ್ದಿದ್ದರಿಂದ ಸ್ವಲ್ಪ ಸಮಯ ಸಂಚಾರಕ್ಕೆ ಅಡ್ಡಿಯಾಗಿತ್ತು.

ಮಗುಚಿ ಬಿದ್ದ ಟ್ಯಾಂಕರ್​​​: ಡೀಸೆಲ್ ತುಂಬಿಕೊಳ್ಳಲು ಮುಗಿಬಿದ್ದ ಜನತೆ

ಟ್ಯಾಂಕರ್ ಮಗುಚಿ ಬಿದ್ದ ಸಮಯದಲ್ಲಿ ಪೊಲೀಸರು ಸ್ಥಳಕ್ಕೆ ಬರಲು ವಿಳಂಬವಾದ ಕಾರಣ ಸ್ಥಳೀಯರು ಹಾಗೂ ಇತರೆ ವಾಹನ ಚಾಲಕರು ಬಾಟಲ್, ಕ್ಯಾನ್, ಬಕೆಟ್​ಗಳಲ್ಲಿ ಡೀಸೆಲ್ ತುಂಬಿಸಲು ಮುಂದಾಗಿದ್ದರು. ಪರಿಣಾಮ ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.

ಇದನ್ನೂ ಓದಿ:ರಾಬರ್ಟ್ ಚಿತ್ರ ಪೈರಸಿ ಮಾಡಲು ಯತ್ನಿಸಿದವ ಅರೆಸ್ಟ್

ಬಳಿಕ ಸ್ಥಳಕ್ಕೆ ಬಂದ ಉಪ್ಪಿನಂಗಡಿ ಪೊಲೀಸರು ಡೀಸೆಲ್ ತುಂಬಿಸುತ್ತಿದ್ದ ಸ್ಥಳೀಯರಿಗೆ, ವಾಹನ ಚಾಲಕರಿಗೆ ಲಘುವಾಗಿ ಲಾಠಿ ಬೀಸುವ ಮೂಲಕ ಗುಂಪು ಚದುರಿಸಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಚರು.

ABOUT THE AUTHOR

...view details