ಬೆಳ್ತಂಗಡಿ (ದಕ್ಷಿಣ ಕನ್ನಡ):ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಧರ್ಮಸ್ಥಳದ ದೊಂಡೋಲೆ ಸಮೀಪದ ನಾರ್ಯ ಎಂಬಲ್ಲಿ ನಡೆದಿದೆ.
ಧರ್ಮಸ್ಥಳ.. ಕುಡಿದ ಮತ್ತಿನಲ್ಲಿ ತಲ್ವಾರ್ನಿಂದ ದಾಳಿ.. ಒಬ್ಬನ ಸ್ಥಿತಿ ಗಂಭೀರ - Dondole of Dharmasthala
ಸದ್ಯ ಗಾಯಾಳುವನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೋಕೇಶ್ ಎಂಬಾತ ಸುರೇಶ್ ಎಂಬುವರ ಮೇಲೆ ತಲ್ವಾರ್ನಿಂದ ದಾಳಿ ಮಾಡಿದ್ದಾನೆ ಎನ್ನಲಾಗಿದೆ. ಲೋಕೇಶ್ ಅಕ್ರಮವಾಗಿ ಮದ್ಯ ತಯಾರಿಸಿ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಸುರೇಶ್ ಆಕ್ಷೇಪ ವ್ಯಕ್ತಪಡಿಸಿದ್ದನಂತೆ. ಇದೇ ವಿಚಾರಕ್ಕೆ ಸುರೇಶ್ ಜೊತೆ ಲೋಕೇಶ್ ಮನಸ್ತಾಪ ಹೊಂದಿದ್ದ ಎನ್ನಲಾಗಿದೆ. ಹಾಗಾಗಿ ಕುಡಿದ ಮತ್ತಿನಲ್ಲಿದ್ದ ಲೋಕೇಶ್ ಏಕಾಏಕಿ ಬಂದು ಸುರೇಶ್ ಮೇಲೆ ತಲ್ವಾರಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದು, ಸುರೇಶ್ ತಲೆಗೆ ಗಂಭೀರ ಗಾಯವಾಗಿದೆ.
ಸದ್ಯ ಗಾಯಾಳುವನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ ಜಿ ಅವರ ನಿರ್ದೆಶನದಂತೆ ಧರ್ಮಸ್ಥಳ ಉಪ ನಿರೀಕ್ಷಕ ಪವನ್ ನಾಯಕ್ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.