ಕರ್ನಾಟಕ

karnataka

ETV Bharat / state

ಹೊಸ ವರ್ಷದ ಹಿನ್ನಲೆ ಹೂಗಳಿಂದ ಸಿಂಗಾರಗೊಂಡ ಧರ್ಮಸ್ಥಳ ಮಂಜುನಾಥ ಸನ್ನಿಧಿ - ಧರ್ಮಸ್ಥಳ ಮಂಜುನಾಥ ಸನ್ನಿಧಿ

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಧರ್ಮಸ್ಥಳ ಕ್ಷೇತ್ರವನ್ನು ವಿಶೇಷವಾಗಿ ಹೂಗಳಿಂದ ಸಿಂಗರಿಸಲಾಗಿದೆ. ಕಳೆದ 12 ವರ್ಷಗಳಿಂದ ಬೆಂಗಳೂರಿನ ಚಂದ್ರ ಲೇಔಟ್ ನಿವಾಸಿಗಳಾದ ಸಾಯಿ ಸರವಣ, ಗೋಪಾಲ್​ ರಾವ್ ಹಾಗೂ ಆನಂದ ಮಂಜುನಾಥ ರಾವ್ ಅವರು ಸೇವಾರ್ಥವಾಗಿ ಹೊಸ ವರ್ಷದ ದಿನ ದೇಗುಲವನ್ನು ಅಲಂಕರಿಸಲಾಗಿತ್ತು.

Dharmashala Manjunatha Temple
ಹೂಗಳಿಂದ ಸಿಂಗಾರಗೊಂಡ ಧರ್ಮಸ್ಥಳ ಮಂಜುನಾಥ ಸನ್ನಿಧಿ

By

Published : Jan 2, 2020, 10:39 AM IST

ದಕ್ಷಿಣ ಕನ್ನಡ/ಧರ್ಮಸ್ಥಳ: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಧರ್ಮಸ್ಥಳ ಮಂಜುನಾಥ ಸನ್ನಿಧಿಯನ್ನು ವಿಶೇಷವಾಗಿ ಹೂಗಳಿಂದ ಅಲಂಕರಿಸಲಾಗಿತ್ತು.

ಹೂಗಳಿಂದ ಸಿಂಗಾರಗೊಂಡ ಧರ್ಮಸ್ಥಳ ಮಂಜುನಾಥ ಸನ್ನಿಧಿ

ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಹೊಸ ವರ್ಷದ ದಿನ ದೇವರ ದರ್ಶನ ಪಡೆಯಲು ವಿವಿಧ ಕಡೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಹೊಸವರ್ಷಾಚರಣೆ ಹಿನ್ನೆಲೆಯಲ್ಲಿ ಕ್ಷೇತ್ರವನ್ನು ವಿಶೇಷವಾಗಿ ಹೂಗಳಿಂದ ಸಿಂಗರಿಸಲಾಗಿದೆ. ಕಳೆದ 12 ವರ್ಷಗಳಿಂದ ಬೆಂಗಳೂರಿನ ಚಂದ್ರಲೇಔಟ್ ನಿವಾಸಿಗಳಾದ ಸಾಯಿ ಸರವಣ, ಗೋಪಾಲ ರಾವ್ ಹಾಗೂ ಆನಂದ ಮಂಜುನಾಥ ರಾವ್ ಅವರು ಹೊಸ ವರ್ಷದ ದಿನ ಸೇವಾರ್ಥವಾಗಿ ದೇಗುಲವನ್ನು ಅಲಂಕಾರ ಮಾಡಿಸುತ್ತಿದ್ದಾರೆ. ಕಬ್ಬು ಭತ್ತದ ತೆನೆ, ದಾಳಿಂಬೆ, ಬಾಳೆದಿಂಡು, ತಾವರೆ, ಹೀಗೆ ವಿವಿಧ ಹೂಗಳ ಸಹಿತ ಒಟ್ಟು ಆರು ಲೋಡ್ ಅಲಂಕಾರಿಕ ವಸ್ತುಗಳನ್ನು ಉಪಯೋಗಿಸಿಕೊಂಡು ದೇಗುಲದ ಹೊರಾಂಗಣ ದ್ವಾರ, ಸುತ್ತುಪೌಳಿ, ಪೌಳಿ ಛಾವಣಿ ಸ್ತಂಭಗಳನ್ನು ಸಿಂಗರಿಸಲಾಗಿದೆ.

ವಿಶೇಷವಾಗಿ ಅಲಂಕಾರಗೊಂಡ ಧರ್ಮಸ್ಥಳ ಮಂಜುನಾಥ ದೇಗುಲವನ್ನು ಭಕ್ತರು ಕಣ್ತುಂಬಿಕೊಳ್ಳುತ್ತಿದ್ದಾರೆ.

ABOUT THE AUTHOR

...view details