ಮಂಗಳೂರು: ಜಗತ್ತನ್ನು ಕಾಡುತ್ತಿರುವ ಕೊರೊನಾ ಸೋಂಕು ಮುಕ್ತಿಗಾಗಿ ನಗರದ ಪಂಪ್‌ವೆಲ್ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ಧನ್ವಂತರಿ ಯಾಗ ನಡೆಯಿತು.
ಕೊರೊನಾ ಸೋಂಕು ಮುಕ್ತಿಗಾಗಿ ಮಂಗಳೂರಿನಲ್ಲಿ'ಧನ್ವಂತರಿ ಯಾಗ' - Pump Well in Mangalore
ಪಂಪ್ ವೆಲ್ ಸಾರ್ವಜನಿಕ ಗಣೇಶೋತ್ಸವ ಸಮಿತಿಯು ಈ ಬಾರಿ ಸರ್ಕಾರದ ನಿಯಮದಂತೆ ಸೀಮಿತ ಭಕ್ತಾದಿಗಳ ಸಮ್ಮುಖದಲ್ಲಿ ಎರಡು ದಿನಗಳ ಕಾಲ ಸಾರ್ವಜನಿಕ ಗಣೇಶೋತ್ಸವ ಆಚರಿಸುತ್ತಿದೆ.
![ಕೊರೊನಾ ಸೋಂಕು ಮುಕ್ತಿಗಾಗಿ ಮಂಗಳೂರಿನಲ್ಲಿ'ಧನ್ವಂತರಿ ಯಾಗ' Dhanvantari Yaga to get rid of corona](https://etvbharatimages.akamaized.net/etvbharat/prod-images/768-512-8525275-thumbnail-3x2-nin.jpg)
ಪಂಪ್ ವೆಲ್ ಸಾರ್ವಜನಿಕ ಗಣೇಶೋತ್ಸವ ಸಮಿತಿಯು ಕಳೆದ 48 ವರ್ಷಗಳಿಂದ ಧನ್ವಂತರಿ ಯಾಗ ಆಯೋಜಿಸುತ್ತಿದೆ. ಈ ಬಾರಿ ಸರ್ಕಾರದ ನಿಯಮದಂತೆ ಸೀಮಿತ ಭಕ್ತಾದಿಗಳ ಸಮ್ಮುಖದಲ್ಲಿ ಎರಡು ದಿನಗಳ ಕಾಲ ಸಾರ್ವಜನಿಕ ಗಣೇಶೋತ್ಸವ ಆಚರಿಸುತ್ತಿದೆ. ಬೆಳಗ್ಗೆ ಸಮಿತಿಯ ವತಿಯಿಂದ ಜಗತ್ತು ಸೋಂಕು ಮುಕ್ತವಾಗಲಿ, ಲೋಕಕಲ್ಯಾಣವಾಗಲೆಂದು ಪ್ರಾರ್ಥಿಸಿ ಸಮರ್ಥ ಋತ್ವಿಜರ ನೇತೃತ್ವದಲ್ಲಿ ಧನ್ವಂತರಿ ಯಾಗ ನಡೆಯಿತು. ಮಧ್ಯಾಹ್ನ 3 ಗಂಟೆಗೆ ನಿಮಜ್ಜನಾ ಪೂಜೆ ನೆರವೇರಿಸಿ, ಗಣೇಶನ ವಿಗ್ರಹವನ್ನು ಜಲಸ್ತಂಭನ ಮಾಡಲಾಗುತ್ತದೆ.
ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಮಾತನಾಡಿ, 'ಜಗತ್ತಿಗೆ ಕೊರೊನಾ ಸೋಂಕಿನ ಬಾಧೆ ಆವರಿಸಿದ್ದು, ಲಕ್ಷಾಂತರ ಮಂದಿ ರೋಗಕ್ಕೆ ತುತ್ತಾಗಿದ್ದಾರೆ. ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದ ನಮ್ಮ ಗಣೇಶೋತ್ಸವ ಸಮಿತಿಯಿಂದ ಲೋಕ ಕಲ್ಯಾಣಕ್ಕಾಗಿ ಧನ್ವಂತರಿ ಯಾಗ ಮಾಡುವ ಸಂಕಲ್ಪ ಮಾಡಿದ್ದೆವು. ಇಂದು ನಿರ್ವಿಘ್ನವಾಗಿ ಯಾಗ ಸಂಪನ್ನಗೊಂಡಿದೆ. ಈ ಮೂಲಕ ಸೋಂಕು ಆದಷ್ಟು ಬೇಗ ನಿವಾರಣೆಯಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆ' ಎಂದು ಹೇಳಿದರು.