ಕರ್ನಾಟಕ

karnataka

ETV Bharat / state

ಪಾವಂಜೆ ದೇವಳದಲ್ಲಿ ಯುವಕ-ಯುವತಿಯರ ರೀಲ್ಸ್ ವಿಡಿಯೋ ಚಿತ್ರೀಕರಣ: ಭಕ್ತರಿಂದ ಆಕ್ರೋಶ - ಪಾವಂಜೆ ದೇವಳದಲ್ಲಿ ಯುವಕ-ಯುವತಿಯರ ರೀಲ್ಸ್ ವಿಡಿಯೋ ಚಿತ್ರೀಕರಣ

ಮಂಗಳೂರು ನಗರದ ಹಳೆಯಂಗಡಿಯ ಪ್ರಸಿದ್ಧ ಪಾವಂಜೆ ಶ್ರೀಮಹಾಲಿಂಗೇಶ್ವರ ಗಣಪತಿ ದೇವಳದಲ್ಲಿ ಇಬ್ಬರು ಯುವತಿಯರೊಂದಿಗೆ ಯುವಕನೋರ್ವ ರೀಲ್ಸ್ ವಿಡಿಯೋ ಚಿತ್ರೀಕರಣ ಮಾಡಿದ್ದನು. ಇದಕ್ಕೆ ಭಕ್ತರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.

By

Published : Aug 28, 2021, 6:57 PM IST

ಮಂಗಳೂರು:ನಗರದ ಹಳೆಯಂಗಡಿಯ ಪ್ರಸಿದ್ಧ ಪಾವಂಜೆ ಶ್ರೀಮಹಾಲಿಂಗೇಶ್ವರ ಗಣಪತಿ ದೇವಳದಲ್ಲಿ ಇಬ್ಬರು ಯುವತಿಯರೊಂದಿಗೆ ಯುವಕನೋರ್ವ ಮಾಡಿರುವ ರೀಲ್ಸ್ ವಿಡಿಯೋಗೆ ಭಕ್ತರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಮುಲ್ಕಿ ನಿವಾಸಿ ಪ್ರತೀಕ್ ಶೆಟ್ಟಿ ಎಂಬಾತ ಇಬ್ಬರು ಯುವತಿಯರೊಂದಿಗೆ ದೇವಸ್ಥಾನದ ಒಳ ಆವರಣದಲ್ಲಿ ವಿಡಿಯೋ ಮಾಡಿದ್ದಾನೆ. ವಿವಿಧ ಹಾಡಿಗೆ ನಾಲ್ಕು ಮಾದರಿಯ ವಿಡಿಯೋಗಳನ್ನು ಶೂಟ್ ಮಾಡಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ದೇವಳದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂದ ವ್ಯಕ್ತಿಯೋರ್ವನು ಯುವಕ ಪ್ರತೀಕ್ ಶೆಟ್ಟಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆತ ಕ್ಷಮೆ ಯಾಚಿಸಿದರೂ, ಇನ್ಮುಂದೆ ದೇವಳಕ್ಕೆ ಕಾಲಿಟ್ಟಲ್ಲಿ ಕಾಲು ಕಡಿಯುತ್ತೇನೆಂದು ಎಚ್ಚರಿಸಿದ್ದಾನೆ. ಆ ಆಡಿಯೋ ಕೂಡಾ ವೈರಲ್ ಆಗುತ್ತಿದೆ.

ಇನ್ನು ತಪ್ಪಿತಸ್ಥ ಯುವಕ, ಯುವತಿಯರು ದೇವಸ್ಥಾನಕ್ಕೆ ಬಂದು ಕ್ಷಮೆ ಕೇಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ‌

ಓದಿ: ನಾಳೆಯಿಂದ ರಾಜ್ಯಾದ್ಯಂತ ಭಾರಿ ಮಳೆ ಸಾಧ್ಯತೆ: 12 ಜಿಲ್ಲೆಗಳಲ್ಲಿ ಹೈ-ಅಲರ್ಟ್

ABOUT THE AUTHOR

...view details