ಬಂಟ್ವಾಳ (ದ.ಕ): ಮೊಡಂಕಾಪು ಸಮೀಪ ಪಲ್ಲಮಜಲಿನಲ್ಲಿ ಆಟೋ ಮತ್ತು ದ್ವಿಚಕ್ರ ವಾಹನದಲ್ಲಿ ಬಂದು ಗಾಂಜಾ ಮಾರುತ್ತಿದ್ದ ಆರೋಪದಲ್ಲಿ ನಾಲ್ವರು ಯುವಕರನ್ನು ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ನೇತೃತ್ವದ ಪೊಲೀಸರ ತಂಡ ಗುರುವಾರ ಬಂಧಿಸಿದೆ.
ಸ್ಥಳೀಯ ನಿವಾಸಿಗಳಾದ ಅಲ್ತಾಫ್ (24), ಅಬ್ದುಲ್ ರಝಾಖ್ (28), ಸಲ್ಮಾನ್ (26) ಮತ್ತು ಪ್ರೀತಮ್ ಮೇನೆಜಸ್ (24) ಬಂಧಿತ ಆರೋಪಿಗಳು.