ಮಂಗಳೂರು: ಆಗಷ್ಟ 16ರಂದು ಉಪ್ಪಿನಂಗಡಿಯಲ್ಲಿ ಚಿನ್ನಾಭರಣ ಮಳಿಗೆಯಲ್ಲಿ ಕಳ್ಳತನ ಮಾಡಿದ ಮೂವರು ಅಂತರಾಜ್ಯ ಕಳ್ಳರನ್ನು ಇಲ್ಲಿನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುಜರಾತ್ ರಾಜ್ಯದ ದಾಹೋಡ್ ಜಿಲ್ಲೆಯ ಭಗವಾನ್ ಸಿಂಗ್ (32), ಸುನೀಲ್ (27), ರಾಜಸ್ಥಾನದ ಬೂಂದಿ ಜಿಲ್ಲೆಯ ಜಮೀಲ್ (60) ಬಂಧಿತ ಆರೋಪಿಗಳು.
ರಾಜಸ್ಥಾನದಿಂದ ಬೆಂಗಳೂರಿಗೆ ಈಚರ್ ಲಾರಿಯಲ್ಲಿ ಬಾಡಿಗೆ ಬಂದಿದ್ದ ಇವರು, ಚಿನ್ನಾಭರಣ ಅಂಗಡಿ ಕಳವು ಮಾಡಲು ತೀರ್ಮಾನಿಸಿ, ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ಆರ್.ಕೆ. ಜ್ಯುವೆಲ್ಲರಿ ಆಭರಣ ಮಳಿಗೆಯಲ್ಲಿ ಚಿನ್ನ ಕಳವು ಮಾಡಿದ್ದರು. ಇವರೊಟ್ಟಿಗೆ ಇನ್ನೂ ಐವರು ಆರೋಪಿಗಳಿದ್ದು, ಅವರ ಬಂಧನಕ್ಕೂ ಬಲೆ ಬೀಸಲಾಗಿದೆ.
ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ನಾಗೇಶ್ ಕದ್ರಿ ಮತ್ತು ಉಪ್ಪಿನಂಗಡಿ ಠಾಣಾ ಪಿಎಸ್ಐ ನಂದಕುಮಾರ್ ಎಂಎಂ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.