ಕರ್ನಾಟಕ

karnataka

ETV Bharat / state

ಸುಳ್ಯ ಪೆರ್ವಾಜೆಯಿಂದ ಬಾಲಕ ನಾಪತ್ತೆ; ಪುತ್ತೂರು ಬಸ್ ನಿಲ್ದಾಣದಲ್ಲಿ ಪತ್ತೆ - ನಾಪತ್ತೆಯಾಗಿದ್ದ ಬಾಲಕ ಪುತ್ತೂರು ಬಸ್ ನಿಲ್ದಾಣದಲ್ಲಿ ಪತ್ತೆ

ಸುಳ್ಯ ತಾಲೂಕು ಪೆರ್ವಾಜೆ ಗ್ರಾಮದ ಕುಂಡಡ್ಕದಿಂದ ಫೆ.11ರಂದು ಬೆಳಿಗ್ಗೆ ನಾಪತ್ತೆಯಾಗಿದ್ದ ಬಾಲಕ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ.

ನಾಪತ್ತೆಯಾಗಿದ್ದ ಬಾಲಕ ಪತ್ತೆ
ನಾಪತ್ತೆಯಾಗಿದ್ದ ಬಾಲಕ ಪತ್ತೆ

By

Published : Feb 11, 2020, 7:20 PM IST

ಮಂಗಳೂರು: ಸುಳ್ಯ ತಾಲೂಕು ಪೆರ್ವಾಜೆ ಗ್ರಾಮದ ಕುಂಡಡ್ಕದಿಂದ ಫೆ.11ರಂದು ಬೆಳಿಗ್ಗೆ ನಾಪತ್ತೆಯಾಗಿದ್ದ ಬಾಲಕ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ.

ಪ್ರಜ್ವಲ್ (11) ನಾಪತ್ತೆಯಾಗಿದ್ದ ಬಾಲಕ. ಚೆನ್ನಾವರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಫೆ.11ರಂದು ಬೆಳಿಗ್ಗೆ ಶೌಚಾಲಯಕ್ಕೆ ಹೋಗಿ ಬರುವುದಾಗಿ ತಾಯಿ ಬಳಿ ಹೇಳಿ ನಿಗೂಢವಾಗಿ ನಾಪತ್ತೆಯಾಗಿದ್ದ. ಹೀಗಾಗಿ, ಬಾಲಕನನ್ನು ಅಪಹರಣ ಮಾಡಲಾಗಿದೆ ಎಂಬ ವದಂತಿಯೂ ಹಬ್ಬಿತ್ತು. ಈ ಬಗ್ಗೆ ಬಾಲಕನ ತಂದೆ ಕುಂಞ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಹುಡುಕಾಟದಲ್ಲಿ ತೊಡಗಿದ್ದರು.

ಕೊನೆಗೆ ಬಾಲಕ ಪುತ್ತೂರು ಕಡೆಗೆ ಬಸ್​ನಲ್ಲಿ ಬಂದಿರುವ ಮಾಹಿತಿ ಸಿಕ್ಕಿದ್ದು, ಕುಟುಂಬಸ್ಥರು ಪುತ್ತೂರು ಬಸ್​ ನಿಲ್ದಾಣದಕ್ಕೆ ಬಂದು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಪ್ರಜ್ವಲ್ ಬಸ್​ ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ. ಶಾಲೆಗೆ ಹೋಗಲು ಮನಸ್ಸಿಲ್ಲದ ಕಾರಣ ಮನೆ ಬಿಟ್ಟು ಬಂದಿದ್ದಾಗಿ ಬಾಲಕ ಹೇಳಿದ್ದಾನೆ ಎಂದು ತಿಳಿದು ಬಂದಿದೆ.

ABOUT THE AUTHOR

...view details