ಕರ್ನಾಟಕ

karnataka

ETV Bharat / state

114 ಅಂಕಪಡೆದರೂ ವಿದ್ಯಾರ್ಥಿನಿ ಫೇಲ್​​..ತಡವಾಗಿ ಬೆಳಕಿಗೆ ಬಂದ ಇಲಾಖೆ ಯಡವಟ್ಟು - Education Minister Suresh Kumar

ಪರೀಕ್ಷಾ ಮಂಡಳಿಯು ಅಂಕವನ್ನು ನಮೂದಿಸುವ ಕಾಲಂನಲ್ಲಿ ಒಟ್ಟು ಅಂಕಗಳನ್ನು ದಾಖಲಿಸುವ ಬದಲು ವಿದ್ಯಾರ್ಥಿನಿ ಪರೀಕ್ಷೆ ಬರೆದಿರುವ ಉತ್ತರ ಪತ್ರಿಕೆಯ ಒಟ್ಟು ಪುಟಗಳ ಸಂಖ್ಯೆ 22 ಎಂಬುದನ್ನು ನಮೂದಿಸಿದೆ. ಇದರಿಂದ ಫಲಿತಾಂಶದಲ್ಲಿ ಅನುತೀರ್ಣ ಎಂದು ಬಂದಿದ್ದು, ಬಳಿಕ ತಪ್ಪಾಗಿರುವುದು ಬೆಳಕಿಗೆ ಬಂದಿದೆ.

Department of Secondary Education did mistake on result of student
ಪ್ರೌಢಶಿಕ್ಷಣ ಇಲಾಖೆ ಯಡವಟ್ಟು...114 ಅಂಕಪಡೆದರೂ ವಿದ್ಯಾರ್ಥಿನಿ ಫೇಲ್​​..!

By

Published : Aug 20, 2020, 4:39 PM IST

ಮಂಗಳೂರು (ದ.ಕ):ಎಸ್ಎಸ್ಎಲ್​​​ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯೋರ್ವಳು ಉತ್ತಮ‌ ಅಂಕಗಳಿಸಿದ್ದರೂ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಯಡವಟ್ಟಿನಿಂದ ಅನುತ್ತೀರ್ಣಳಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆತೂರು ಬದ್ರಿಯ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ 5 ವಿಷಯಗಳಲ್ಲಿ ಉತ್ತಮ‌ ಅಂಕ ಪಡೆದಿದ್ದಳು.‌ ಆದರೆ ಕನ್ನಡ ವಿಷಯದಲ್ಲಿ 22 ಅಂಕ ಪಡೆದಿದ್ದಳು. ಇದರಿಂದ ವಿದ್ಯಾರ್ಥಿನಿ ಆಘಾತಕ್ಕೊಳಗಾಗಿದ್ದಳು. ತಕ್ಷಣ ವಿದ್ಯಾರ್ಥಿನಿಯ ಪೋಷಕರು, ಇಲಾಖೆಗೆ ಹಣ ಕಟ್ಟಿ ಪತ್ರಿಕೆಯನ್ನು ತರಿಸಿ ನೋಡಿದಾಗ ಪ್ರೌಢ ಶಿಕ್ಷಣ ಮಂಡಳಿಯ ಯಡವಟ್ಟು ಬೆಳಕಿಗೆ ಬಂದಿದೆ.

ವಿದ್ಯಾರ್ಥಿನಿಯ ಎಸ್​ಎಸ್​​​​ಎಲ್​​ಸಿ ಪರೀಕ್ಷಾ ಉತ್ತರ ಪತ್ರಿಕೆ

ಪರೀಕ್ಷಾ ಮಂಡಳಿಯು ಅಂಕವನ್ನು ನಮೂದಿಸುವ ಕಾಲಂನಲ್ಲಿ ಒಟ್ಟು ಅಂಕಗಳನ್ನು ದಾಖಲಿಸುವ ಬದಲು ವಿದ್ಯಾರ್ಥಿನಿ ಪರೀಕ್ಷೆ ಬರೆದಿರುವ ಉತ್ತರ ಪತ್ರಿಕೆಯ ಒಟ್ಟು ಪುಟಗಳ ಸಂಖ್ಯೆ 22 ಎಂಬುದನ್ನು ನಮೂದಿಸಿತ್ತು. ಅದಲ್ಲದೆ ವಿದ್ಯಾರ್ಥಿನಿ ಕನ್ನಡ ಪತ್ರಿಕೆಯಲ್ಲಿ ಗಳಿಸಿರುವ ಒಟ್ಟು ಅಂಕ‌ 90. ಆದರೆ ಒಟ್ಟು ಅಂಕ ನಮೂದಿಸುವಾಗ 87 ಎಂದಾಗಿದೆ. ಇಲ್ಲಿಯೂ 3 ಅಂಕ ಕಡಿಮೆ ಹಾಕಲಾಗಿದೆ‌.

ವಾಸ್ತವದಲ್ಲಿ ವಿದ್ಯಾರ್ಥಿನಿ ಉತ್ತರ ಪತ್ರಿಕೆಯಲ್ಲಿ 90 ಮತ್ತು ಇಂಟರ್ನಲ್ ಮಾಕ್ಸ್ 24 ಸೇರಿ 114 ಅಂಕಗಳಾಗುತ್ತವೆ. ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದರೂ ಪ್ರೌಢ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿನಿ ಮತ್ತು ಆಕೆಯ ಪೋಷಕರು ಆಘಾತಕ್ಕೀಡಾಗುವಂತೆ ಮಾಡಿದೆ.

ABOUT THE AUTHOR

...view details