ಕರ್ನಾಟಕ

karnataka

By

Published : Dec 5, 2019, 8:22 PM IST

ETV Bharat / state

ಲೈಟ್ ಫಿಶಿಂಗ್, ಬುಲ್ ಟ್ರಾಲ್ ವಿರುದ್ಧ ಮೀನುಗಾರಿಕಾ ಇಲಾಖೆ ವಿಶೇಷ ಕಾರ್ಯಾಚರಣೆ...

ಸಮುದ್ರದಲ್ಲಿ ಪ್ರಖರ ಬೆಳಕು ಹಾಯಿಸಿ ನಡೆಸುವ ಲೈಟ್ ಫಿಶಿಂಗ್ ಮೀನುಗಾರಿಕೆ, ಬುಲ್‌ಟ್ರಾಲ್‌, ಸಣ್ಣ ಕಣ್ಣಿನ ಬಲೆ ಬಳಕೆ ಮೊದಲಾದ ಅಕ್ರಮ ಮೀನುಗಾರಿಕೆ ತಡೆಯುವುದಕ್ಕೆ ಇದೀಗ ಮೀನುಗಾರಿಕಾ ಇಲಾಖೆ ವಿಶೇಷ ಕಾರ್ಯಾಚರಣೆಯನ್ನು ಮಂಗಳೂರಿನಲ್ಲಿ ಆರಂಭಿಸಿದೆ.

department-of-fisheries-special-operations-against-light-fishing-bull-trawl
ಲೈಟ್ ಫಿಶಿಂಗ್, ಬುಲ್ ಟ್ರಾಲ್ ವಿರುದ್ದ ಮೀನುಗಾರಿಕಾ ಇಲಾಖೆ ವಿಶೇಷ ಕಾರ್ಯಾಚರಣೆ...

ಮಂಗಳೂರು: ಸಮುದ್ರದಲ್ಲಿ ಪ್ರಖರ ಬೆಳಕು ಹಾಯಿಸಿ ನಡೆಸುವ ಲೈಟ್ ಫಿಶಿಂಗ್ ಮೀನುಗಾರಿಕೆ, ಬುಲ್‌ಟ್ರಾಲ್‌, ಸಣ್ಣ ಕಣ್ಣಿನ ಬಲೆ ಬಳಕೆ ಮೊದಲಾದ ಅಕ್ರಮ ಮೀನುಗಾರಿಕೆ ತಡೆಯುವುದಕ್ಕೆ ಇದೀಗ ಮೀನುಗಾರಿಕಾ ಇಲಾಖೆ ವಿಶೇಷ ಕಾರ್ಯಾಚರಣೆ ಆರಂಭಿಸಿದೆ.

ಲೈಟ್‌ಫಿಶಿಂಗ್‌ ಮತ್ತು ಬುಲ್‌ಟ್ರಾಲ್‌ ಮೀನುಗಾರಿಕೆಯನ್ನು ದೇಶದಲ್ಲೇ ನಿಷೇಧಿಸಿದ್ದರೂ ಕರಾವಳಿಯಲ್ಲಿ ಮಾತ್ರ ಸದ್ದಿಲ್ಲದೇ ನಡೆಯುತ್ತಿದ್ದು, ಈ ಕುರಿತು ಮೀನುಗಾರರ ಸಂಘಟನೆಗಳು ನಿರಂತರ ದೂರು ನೀಡುತ್ತಲೆ ಬಂದಿದ್ದವು. ಈ ನಡುವೆ ಮಂಗ‌ಳೂರು ಭಾಗದಲ್ಲಿ ಕೆಲವು ಬೋಟ್‌ಗಳ ನಡುವೆ ಸಂಘರ್ಷ ಉಂಟಾಗಿರುವ ಹಿನ್ನೆಲೆಯಲ್ಲಿ ಮೀನುಗಾರಿಕಾ ಇಲಾಖೆ ಕೆ ಎಸ್ ಆರ್ ಪಿ ಪೊಲೀಸರ ನೆರವು ಪಡೆದು ಮೂರು ತಂಡಗಳನ್ನು ರಚಿಸಿ ಕಾರ್ಯಾಚರಣೆಗಿಳಿದಿದೆ.

ಲೈಟ್ ಫಿಶಿಂಗ್, ಬುಲ್ ಟ್ರಾಲ್ ವಿರುದ್ದ ಮೀನುಗಾರಿಕಾ ಇಲಾಖೆ ವಿಶೇಷ ಕಾರ್ಯಾಚರಣೆ

ಪರ್ಸಿನ್‌ ಬೋಟ್‌ನವರ ಲೈಟ್‌ಫಿಶಿಂಗ್‌ನಿಂದಾಗಿ ಮೀನು ಸಂತತಿ ನಶಿಸಿ ಹೋಗುತ್ತಿದೆ ಎಂದು ಟ್ರಾಲ್‌ಬೋಟ್‌ ಹಾಗೂ ನಾಡದೋಣಿಯವರು ದೂರು ನೀಡಿದರೆ, ಟ್ರಾಲ್‌ಬೋಟ್‌ನವರು ಬುಲ್‌ಟ್ರಾಲ್‌ ಮಾಡಿ ಅಕ್ರಮವೆಸಗುತ್ತಿದ್ದಾರೆ ಎಂಬುದು ಪರ್ಸಿನ್‌ ಬೋಟ್‌ನವರ ದೂರಾಗಿದೆ. ಸಣ್ಣ ಕಣ್ಣಿನ ಬಲೆಗಳನ್ನು (35 ಎಂಎಂಗಿಂತ ಕಡಿಮೆ) ಉಪಯೋಗಿಸುತ್ತಿರುವುದರಿಂ, ಅತೀ ಸಣ್ಣ ಮೀನುಗಳು ಕೂಡ ಬಲೆಗೆ ಬಿದ್ದು ಮತ್ಸ್ಯಕ್ಷಾಮವಾಗುತ್ತಿದೆ ಎಂದು ಆರೋಪ ಕೇಳಿಬರುತ್ತಿದೆ.

ಐದು ದಿನಗಳಲ್ಲಿ 30ಕ್ಕೂ ಅಧಿಕ ಬೋಟ್‌ಗಳ ತಪಾಸಣೆ ನಡೆಸಲಾಗಿದ್ದು, 8 ಬೋಟ್‌ಗಳನ್ನು ಲೈಟ್‌ ಫಿಶಿಂಗ್​ಗೆ ಬಳಸಿರುವುದು ಪತ್ತೆಯಾಗಿದೆ. 5 ಬೋಟ್‌ಗಳು ನಿಗದಿಗಿಂತ ಸಣ್ಣ ಬಲೆಗಳನ್ನು ಬಳಸಿ (10 ಎಂಎಂ, 20 ಎಂಎಂ) ಮೀನು ಮರಿಗಳನ್ನು ಹಿಡಿಯುತ್ತಿರುವುದು ಕೂಡಾ ಗಮನಕ್ಕೆ ಬಂದಿದೆ. ಅಕ್ರಮ ಪತ್ತೆಯಾದ ಬೋಟ್‌ಗಳ ಮಾಲೀಕರಿಗೆ ನೋಟಿಸ್‌ ಕಳುಹಿಸಲಾಗಿದೆ.

ABOUT THE AUTHOR

...view details