ಕರ್ನಾಟಕ

karnataka

ETV Bharat / state

ಪುಣೆಯಲ್ಲಿ ಸ್ಕೂಟರ್​​ನಲ್ಲಿ ಕ್ಲಿನಿಕ್​ಗೆ ತೆರಳುತ್ತಿದ್ದ ವೇಳೆ ಅಪಘಾತ : ಮಂಗಳೂರು ಮೂಲದ ದಂತವೈದ್ಯೆ ಬಲಿ - ಪುಣೆಯ ಉದ್ಯಮಿ ರಿಮಿನ್ ಆರ್ ಕುರಿಯಾಕೋಸ್

ಪುಣೆಯ ಪಿಂಪ್ರಿಯ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ದಂತ ವೈದ್ಯೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಡಾ. ಜೈಶಾ
ಡಾ. ಜೈಶಾ

By

Published : Sep 15, 2022, 8:07 PM IST

ಮಂಗಳೂರು:ಮಂಗಳೂರು ಮೂಲದ ದಂತ ವೈದ್ಯೆಯೊಬ್ಬರು ಪುಣೆಯ ಪಿಂಪ್ರಿಯ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಡಾ. ಜೈಶಾ ( 27) ಮೃತಪಟ್ಟವರು. ಮಂಗಳೂರಿನ ವೆಲೆನ್ಸಿಯಾ ನಿವಾಸಿಯಾಗಿದ್ದು, ಪುಣೆಯ ಪಿಂಪ್ರಿಯಲ್ಲಿ ದಂತ ವೈದ್ಯೆಯಾಗಿದ್ದರು. ಮಂಗಳೂರಿನಲ್ಲಿ ನೆಲೆಸಿದ್ದ ಇವರನ್ನು ಪುಣೆಯ ಉದ್ಯಮಿ ರಿಮಿನ್ ಆರ್ ಕುರಿಯಾಕೋಸ್ ಅವರಿಗೆ ಒಂದೂವರೆ ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಇವರು ಮಂಗಳೂರಿನ ಜಾನ್ ಥಾಮಸ್ ಮತ್ತು ಉಷಾ ಜಾನ್ ದಂಪತಿಯ ಪುತ್ರಿಯಾಗಿದ್ದಾರೆ.

ಜೈಶಾ ಅವರು ಸ್ಕೂಟರ್​ನಲ್ಲಿ ಪುಣೆಯ ಪಿಂಪ್ರಿಯಲ್ಲಿ ಮಧ್ಯಾಹ್ನ ಊಟ ಮುಗಿಸಿ ಕ್ಲಿನಿಕ್‌ಗೆ ಹೋಗುತ್ತಿದ್ದ ವೇಳೆ ಅವರು ಸಂಚರಿಸುತ್ತಿದ್ದ ಸ್ಕೂಟರ್​ಗೆ ಟ್ರಕ್ ಢಿಕ್ಕಿ ಹೊಡೆದಿದೆ‌.‌ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ‌.

ಪಾರ್ಥಿವ ಶರೀರವನ್ನು ಪುಣೆಯಲ್ಲಿರುವ ಅವರ ಮನೆಯಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಿದ ನಂತರ ರಸ್ತೆ ಮಾರ್ಗವಾಗಿ ಮಂಗಳೂರಿಗೆ ತರಲಾಗಿದೆ. ಬುಧವಾರದಂದು ಮಂಗಳೂರಿನ ಜೆಪ್ಪುವಿನ ಸೈಂಟ್ ಆಂಟೋನಿ ಜಾಕೋಬೈಟ್ ಸಿರಿಯನ್ ಕೆಥೆಡ್ರಲ್‌ನ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಓದಿ:ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ.. ಕಾರಣ?

ABOUT THE AUTHOR

...view details