ಕರ್ನಾಟಕ

karnataka

ETV Bharat / state

ಡೆಂಗ್ಯೂ ರೋಗ ತಡೆಗಟ್ಟಲು ಪರಿಶೀಲನೆ, ತಪಾಸಣೆ: 85 ಸಾವಿರ ದಂಡ! - etv bharat

ದ.ಕ. ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಮಹಾನಗರಪಾಲಿಕೆ ಸಂಯುಕ್ತ ಆಶ್ರಯದಲ್ಲಿ ನಡೆದ ಬೃಹತ್ ಆಂದೋಲನದಲ್ಲಿ ಈ ಪ್ರದೇಶಗಳನ್ನು ಗ್ರಿಡ್ 1 ಎಂದು ಪರಿಗಣಿಸಿ ವ್ಯವಸ್ಥಿತವಾಗಿ ತೀವ್ರ ಪರಿಶೀಲನೆ, ತಪಾಸಣಾ ಚಟುವಟಿಕೆ ನಡೆಸಲಾಯಿತು. ಈ ಚಟುವಟಿಕೆಯಲ್ಲಿ ಸುಮಾರು 250ಕ್ಕೂ ಅಧಿಕ ಸಿಬ್ಬಂದಿ, ಸ್ವಯಂಸೇವಕರು, ಅಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು.

ಡೆಂಗ್ ರೋಗ ತಡೆಗಟ್ಟಲು ಪರಿಶೀಲನೆ,ತಪಾಸಣೆ: 85 ಸಾವಿರ ದಂಡ!

By

Published : Jul 21, 2019, 11:49 PM IST

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ರೋಗದ ಪ್ರಮಾಣ ಅಧಿಕವಾಗಿದ್ದು, ರೋಗ ನಿಯಂತ್ರಣದ ಅಂಗವಾಗಿ ಡೆಂಗ್ಯೂ ವ್ಯಾಪಕವಾಗಿ ಕಂಡುಬಂದಿರುವ ಗುಜ್ಜರಕೆರೆ, ಬೋಳಾರ, ಎಮ್ಮೆಕೆರೆ, ಮಹಾಕಾಳಿಪಡ್ಪು, ಮಂಗಳಾದೇವಿ ಪ್ರದೇಶಗಳಲ್ಲಿ‌ ತೀವ್ರ ಪರಿಶೀಲನೆ ಹಾಗೂ ತಪಾಸಣೆ ನಡೆಸಲಾಯಿತು.

ದ.ಕ. ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಮಹಾನಗರಪಾಲಿಕೆ ಸಂಯುಕ್ತ ಆಶ್ರಯದಲ್ಲಿ ನಡೆದ ಬೃಹತ್ ಆಂದೋಲನದಲ್ಲಿ ಈ ಪ್ರದೇಶಗಳನ್ನು ಗ್ರಿಡ್ 1 ಎಂದು ಪರಿಗಣಿಸಿ ವ್ಯವಸ್ಥಿತವಾಗಿ ತೀವ್ರ ಪರಿಶೀಲನೆ, ತಪಾಸಣಾ ಚಟುವಟಿಕೆ ನಡೆಸಲಾಯಿತು. ಈ ಚಟುವಟಿಕೆಯಲ್ಲಿ ಸುಮಾರು 250ಕ್ಕೂ ಅಧಿಕ ಸಿಬ್ಬಂದಿ, ಸ್ವಯಂಸೇವಕರು, ಅಧಿಕಾರಿಗಳು ಭಾಗವಹಿಸಿದ್ದರು.

ನಿರ್ದಾಕ್ಷಿಣ್ಯ ದಂಡ ವಿಧಿಸಲು ಡಿ.ಸಿ. ಸೂಚನೆ:

ಈ ಪ್ರದೇಶಗಳ ಮನೆ, ಉದ್ದಿಮೆ, ಅಂಗಡಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿ, ರೋಗ ನಿಯಂತ್ರಣ, ಸೊಳ್ಳೆ ಉತ್ಪತ್ತಿ ತಾಣಗಳಿಗೆ ಅವಕಾಶ ನೀಡದಂತೆ ಜಾಗೃತಿ ಮೂಡಿಸಲಾಯಿತು. ಅಲ್ಲದೇ ಹಲವು ದಿನಗಳಿಂದ ನೀರು ನಿಂತು ಸೊಳ್ಳೆ ಉತ್ಪತ್ತಿಗೆ ಕಾರಣವಾದವರಿಗೆ ಸ್ಥಳದಲ್ಲೇ ದಂಡ ವಿಧಿಸಲಾಯಿತು. ಇಂದು ಒಟ್ಟು 85 ಸಾವಿರ ರೂ. ದಂಡ ಸಂಗ್ರಹಿಸಲಾಗಿದೆ. ಈ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ದಾಕ್ಷಿಣ್ಯ ದಂಡ ವಿಧಿಸಲು ಡಿ.ಸಿ. ಸೂಚನೆ:

ನೀರು ನಿಂತು ಸೊಳ್ಳೆ ಉತ್ಪತ್ತಿಗೆ ಕಾರಣರಾದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸಲು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಇಂದು ಸಂಜೆ ತಮ್ಮ ಕಚೇರಿಯಲ್ಲಿ ಡೆಂಗ್ಯೂ ನಿಯಂತ್ರಣ ಕಾರ್ಯಗಳ ಪರಿಶೀಲನೆ ನಡೆಸಿ, ನಗರದಲ್ಲಿನ ಮನೆಗಳು, ಅಂಗಡಿಗಳು, ಉದ್ದಿಮೆ ಸಂಸ್ಥೆಗಳು, ಮಾರುಕಟ್ಟೆಗಳು, ಅಪಾರ್ಟ್ ಮೆಂಟ್ ಗಳು, ಫ್ಲಾಟ್ ಗಳು, ಸರಕಾರಿ ಕಟ್ಟಡಗಳು, ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ತಪಾಸಣೆ ನಡೆಸಬೇಕು ಎಂದು ಅವರು ಆದೇಶ ನೀಡಿದ್ದರು. ಅಲ್ಲದೆ ಯಾವುದೇ ಸ್ಥಳದಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗಿರುವುದು ಕಂಡು ಬಂದರೆ ಅಂತಹ ಪರಿಸರದ ವ್ಯಕ್ತಿಗಳಿಗೆ ಸ್ಥಳದಲ್ಲಿಯೇ ದೊಡ್ಡ ಮೊತ್ತದ ದಂಡ ವಿಧಿಸಿ ವಸೂಲಿ ಮಾಡುವಂತೆ ಅವರು ಮಹಾನಗರಪಾಲಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ABOUT THE AUTHOR

...view details