ಕರ್ನಾಟಕ

karnataka

ETV Bharat / state

ಬಂಟ್ವಾಳದ ಜನರಿಗೆ ಕೊರೊನಾ ಜೊತೆ ಡೆಂಗ್ಯೂ ಕಾಟ - ಬಂಟ್ವಾಳ ಡೆಂಘ್ಯು ಸುದ್ದಿ

ಇದುವರೆಗೆ ಒಟ್ಟು 21 ಪ್ರಕರಣಗಳು ವರದಿಯಾಗಿದ್ದರೆ 72 ಮಂದಿಗೆ ರೋಗ ತಗಲಿರುವ ಶಂಕೆ ಇದೆ. ತಾಲೂಕಿನ ಪುಣಚ, ವಿಟ್ಲ, ಅಡ್ಯನಡ್ಕ, ಮಾಣಿ, ಕಲ್ಲಡ್ಕ, ಮಾಣಿಲ ಹಾಗೂ ಪೆರುವಾಯಿ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಪ್ರಕರಣಗಳು ವರದಿಯಾಗಿವೆ.

ಬಂಟ್ವಾಳದಲ್ಲಿ ಕೊರೊನಾ ಜೊತೆ ಡೆಂಘ್ಯು ಕಾಟ ಶುರು
ಬಂಟ್ವಾಳದಲ್ಲಿ ಕೊರೊನಾ ಜೊತೆ ಡೆಂಘ್ಯು ಕಾಟ ಶುರು

By

Published : Jun 19, 2020, 1:14 PM IST

ಬಂಟ್ವಾಳ: ಕೊರೊನಾ ಸೋಂಕಿತ ಪ್ರಕರಣಗಳ ಮಧ್ಯೆ ಬಂಟ್ವಾಳದಲ್ಲಿ ಇದೀಗ ಡೆಂಗ್ಯೂ ಆರ್ಭಟ ಶುರುವಾಗಿದೆ.

ಡಾ. ದೀಪಾ ಪ್ರಭು, ತಾಲೂಕು ಆರೋಗ್ಯಾಧಿಕಾರಿ, ಬಂಟ್ವಾಳ

ಓದಿ:ವರ್ಲ್ಡ್ ಬುಕ್​​ ಆಫ್​​ ರೆಕಾರ್ಡ್ಸ್‌ ದಾಖಲೆ... ಮಂಗಳೂರು ವಿದ್ಯಾರ್ಥಿಯಿಂದ ತುಳುವಿನಲ್ಲಿ 21 ಅಡಿ ಉದ್ದದ ಹಾಡು!

ಪ್ರಸ್ತುತ ಪುಣಚ ಗ್ರಾಮದಲ್ಲಿ 6, ವಿಟ್ಲ, ಅಡ್ಯನಡ್ಕದಲ್ಲಿ ತಲಾ 4, ಮಾಣಿ, ಮಾಣಿಲದಲ್ಲಿ ತಲಾ 2 ಹಾಗೂ ಕಲ್ಲಡ್ಕ, ಪೆರುವಾಯಿ ಹಾಗೂ ಮಂಚಿ ಗ್ರಾಮದಲ್ಲಿ ತಲಾ ಒಂದೊಂದು ಪ್ರಕರಣಗಳಿವೆ. ಒಟ್ಟು 72 ಶಂಕಿತ ಡೆಂಗ್ಯು ಪ್ರಕರಣ ಪತ್ತೆಯಾಗಿದ್ದು, ಆರೋಗ್ಯ ಇಲಾಖೆಯು ರಕ್ತದ ಮಾದರಿಗಳನ್ನು ತಪಾಸಣೆಗೆ ಕಳುಹಿಸಿಕೊಟ್ಟಿದೆ.

ಡೆಂಗ್ಯು ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಗಳನ್ನು ನಡೆಸುವುದರ ಜತೆಗೆ ಮನೆ ಮನೆ ಭೇಟಿಯ ಅಭಿಯಾನವನ್ನೂ ನಡೆಸಲಾಗುತ್ತಿದೆ ಎಂದು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ತಿಳಿಸಿದ್ದಾರೆ.

ABOUT THE AUTHOR

...view details