ಕಡಬ (ದಕ್ಷಿಣ ಕನ್ನಡ):ಕಳೆದ ವರ್ಷ ಕಡಬ ತಾಲೂಕಿನ ಕೋಡಿಂಬಾಳ ಭಾಗದಲ್ಲಿ ವ್ಯಾಪಕ ಡೆಂಗ್ಯೂ ಜ್ವರ ಕಾಣಿಸಿಕೊಂಡ ಪ್ರದೇಶದಲ್ಲಿ ಮತ್ತೆ ಜ್ವರದ ಪ್ರಕರಣಗಳು ಮರುಕಳಿಸಿವೆ.
ಕಡಬ ಕೋಡಿಂಬಾಳದಲ್ಲಿ ಮೂವರಿಗೆ ಡೆಂಗ್ಯೂ ಜ್ವರ - Dengue case
ಕೋಡಿಂಬಾಳ ಗ್ರಾಮದ ಮುಳಿಯ ಎಂಬಲ್ಲಿನ ಒಂದೇ ಕುಟುಂಬದ ಮೂವರಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಕಳೆದ ವರ್ಷ ಕಡಬ ತಾಲೂಕಿನ ಕೋಡಿಂಬಾಳ ಭಾಗದಲ್ಲಿ ವ್ಯಾಪಕ ಡೆಂಗ್ಯೂ ಜ್ವರ ಕಾಣಿಸಿಕೊಂಡಿತ್ತು.
ಡೆಂಗ್ಯೂ ಪ್ರಕರಣ
ಕೋಡಿಂಬಾಳ ಗ್ರಾಮದ ಮುಳಿಯ ಎಂಬಲ್ಲಿನ ಒಂದೇ ಕುಟುಂಬದ ಮೂವರಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಲೋಹಿತ್, ತೇಜಶ್ವಿನಿ ಹಾಗೂ ಶೃತಿ ಎಂಬುವರು ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಜಿಲ್ಲಾ ರೋಗ ವಾಹಕ ಮತ್ತು ಆಶ್ರಿತ ರೋಗಗಳ ನಿಯಂತ್ರಾಣಾಧಿಕಾರಿ ಡಾ. ನವೀನ ಚಂದ್ರ ಕುಲಾಳ್ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, ಡೆಂಗ್ಯೂ ಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಆ ಭಾಗದಲ್ಲಿ ಕೂಡಲೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತೇವೆ. ಸಾರ್ವಜನಿಕರ ಸಹಕಾರ ನಮಗೆ ಬಹುಮುಖ್ಯವಾಗಿ ಬೇಕು ಎಂದರು.