ಆಲಂಕಾರು :108 ತುರ್ತು ಸೇವಾ ಆ್ಯಂಬುಲೆನ್ಸ್ನಲ್ಲಿಯೇ ಗರ್ಭಿಣಿಯೋರ್ವರು ಮಗುವಿಗೆ ಜನ್ಮ ನೀಡಿದ ಘಟನೆ ಶನಿವಾರದಂದು ನಡೆದಿದೆ.
ಸವಣೂರು ಅಟ್ಟೊಳೆ ನಿವಾಸಿ ವಿದ್ಯಾ(23) ಎಂಬುವರಿಗೆ ಹೆರಿಗೆ ನೋವು ಕಾಣಿಸಿದ ಹಿನ್ನೆಲೆ ಆಲಂಕಾರುವಿನ ಆ್ಯಂಬುಲೆನ್ಸ್ನಲ್ಲಿ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಸವಣೂರಿನಿಂದ ಪುತ್ತೂರು ನಡುವೆ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.