ಮಂಗಳೂರು: ಕೇರಳದ ಕೋಯಿಕೋಡ್‌ನ ಕರಿಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ದುರಂತದಲ್ಲಿ ಮೃತರಾದ ಪೈಲಟ್ ದೀಪಕ್ ವಸಂತ ಸಾಠೆ ಅವರು, ಮಂಗಳೂರು ಏರ್ ಇಂಡಿಯಾ ಬೇಸ್ನಲ್ಲಿಯೂ ಸೇವೆ ಸಲ್ಲಿಸಿದ್ದರು.
ಮಂಗಳೂರಿನ ಏರ್ ಬೇಸ್ನಲ್ಲಿ ಸೇವೆ ಸಲ್ಲಿಸಿದ್ದ ಪೈಲಟ್ ದೀಪಕ್ ಸಾಠೆ - pilot Deepak Saathe
ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್ ದೀಪಕ್ ವಸಂತ ಸಾಠೆ ಅವರು ಮಂಗಳೂರಿನ ಏರ್ ಇಂಡಿಯಾ ಬೇಸ್ನಲ್ಲಿಯೂ ಸೇವೆ ಸಲ್ಲಿಸಿದ್ದಾರೆ.
ಪೈಲಟ್ ದೀಪಕ್ ವಸಂತ ಸಾಠೆ ದಂಪತಿ
2015-16 ವರ್ಷದಲ್ಲಿ ಇವರು ಮಂಗಳೂರಿನಲ್ಲಿ 15 ತಿಂಗಳು ಸೇವೆ ಸಲ್ಲಿಸಿದ್ದಾರೆ. ನಗರದ ಕದ್ರಿ ಪಾರ್ಕ್ ಬಳಿಯ ಪ್ಲಾಟ್ನಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದರು ಎಂದು ಸ್ಥಳೀಯ ನಿವಾಸಿ ಲ್ಯಾನ್ಸ್ ಲಾಟ್ ಸಲ್ದಾನ ತಿಳಿಸಿದ್ದಾರೆ.
ಸದಾ ಹಸನ್ಮುಖಿ, ಸರಳ ವ್ಯಕ್ತಿತ್ವದ ದೀಪಕ್ ವಸಂತ್ ಸಾಠೆ ಎಲ್ಲರ ಜೊತೆ ಬೆರೆಯುವಂತಹ ಗುಣ ಹೊಂದಿದ್ದರು. ಇದರಿಂದ ಮಂಗಳೂರಿನಲ್ಲಿಯೂ ಅವರಿಗೆ ಬಹಳಷ್ಟು ಆಪ್ತ ವಲಯ ಸೃಷ್ಟಿಯಾಗಿತ್ತು. ಅವರು ಇಲ್ಲಿನ ಕದ್ರಿ ಪಾರ್ಕ್ನಲ್ಲಿ ವಾಯು ವಿಹಾರಕ್ಕೆ ಬರುತ್ತಿದ್ದರು ಎಂದು ಉದ್ಯಮಿ ಸಲ್ದಾನ ಸ್ಮರಿಸಿದರು.