ಬೆಳ್ತಂಗಡಿ (ದಕ್ಷಿಣ ಕನ್ನಡ):ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (National Council of Educational Research and Training) ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನ ದೀಕ್ಷಾ ಬಿ.ಎಸ್. ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಇಲ್ಲಿ ಆಯ್ಕೆಯಾದವರು ಪ್ರಾದೇಶಿಕ ಶಿಕ್ಷಣ ಸಂಸ್ಥೆ (Regional Institution of Education) ಗಳಲ್ಲಿ ಮೂಲವಿಜ್ಞಾನ ಓದಲು ಅರ್ಹತೆ ಪಡೆಯುತ್ತಾರೆ. ಆರ್ಐಇ ಮೈಸೂರಿನಲ್ಲಿ ಉನ್ನತ ವ್ಯಾಸಂಗಕ್ಕೆ ದೀಕ್ಷಾ ಅವರು ಆಯ್ಕೆಯಾಗಿದ್ದಾರೆ. ಎಂಎಸ್ಸಿ ಇಡಿ ಮತ್ತು ಬಿಎಸ್ಸಿ ಇಡಿ ಪದವಿಗೆ ಅರ್ಹತೆ ಪಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ದೀಕ್ಷಾ ಎಂಎಸ್ಸಿ ಇಡಿ ಗಣಿತ ಮತ್ತು ಎಂಎಸ್ಸಿ ಇಡಿ ರಸಾಯನ ಶಾಸ್ತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನ, ಬಿಎಸ್ಸಿ ಇಡಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.