ಮಂಗಳೂರು :ಇಂದು ಹೊಸ ವರ್ಷದ ಸಂಭ್ರಮ. ಎಲ್ಲರೂ ಹೊಸ ವರ್ಷವನ್ನು ಸ್ವಾಗತಿಸುತ್ತಾ, ವರ್ಷಪೂರ್ತಿ ಸುಖ-ಶಾಂತಿ ನೆಲೆಸಲೆಂಬಂತೆ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಾರೆ. ಆದರೆ ಭಕ್ತರೊಬ್ಬರು ಹೊಸ ವರ್ಷದ ಹಿನ್ನೆಲೆಯಲ್ಲಿ ಧರ್ಮಸ್ಥಳ ಶ್ರೀಕ್ಷೇತ್ರವನ್ನೇ ಫಲ-ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಿದ್ದಾರೆ.
ಬೆಂಗಳೂರಿನ ಉದ್ಯಮಿ ಗೋಪಾಲ್ ರಾವ್ ಆನಂದ, ಶರವಣನ್ ಕಳೆದ 15 ವರ್ಷಗಳಿಂದ ಹೊಸವರ್ಷದ ಸಂದರ್ಭ ಮಂಜುನಾಥ ಸ್ವಾಮಿಗೆ ಅಲಂಕಾರ ಸೇವೆ ಮಾಡುತ್ತ ಬಂದಿದ್ದಾರೆ. ಅದರಂತೆ ಈ ಬಾರಿಯೂ ದೇವಸ್ಥಾನದ ಮುಂಭಾಗ, ಒಳಾಂಗಣದ ಗರ್ಭಗುಡಿಯ ಮುಂಭಾಗ, ಕಂಬಗಳು ಸೇರಿದಂತೆ ಪ್ರಮುಖ ಸ್ಥಳಗಳನ್ನು ಹೂ, ಹಣ್ಣು ಮತ್ತು ತರಕಾರಿಗಳಿಂದ ಸಿಂಗರಿಸಿದ್ದಾರೆ.